ಕುಮಟಾ: ತಾರಿಮಕ್ಕಿಯಿಂದ ಬಾವಿಕೊಡ್ಲದ ಕಡೆ ಬೈಕ್ ಓಡಿಸಿಕೊಂಡು ಬರುತ್ತಿದ್ದ ವಿರಾಜ ಕವರಿ ಅವರ ಮೇಲೆ 9 ಜನರ ಗುಂಪು ದಾಳಿ ನಡೆಸಿದೆ. ದಾಳಿ ನಡೆಸಿದವರು 18-25 ವರ್ಷದೊಳಗಿನವಾಗಿದ್ದು, ಹಿಂದಿಯಲ್ಲಿ ಬೈದ ಬಗ್ಗೆ ಅವರು ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.
ಕುಮಟಾ ತೊರ್ಕೆಯ ವಿರಾಜ ಕವರಿ ಅವರು ಗಣಾಂಜಯ ಲಾಡ್ಜಿನಲ್ಲಿ ಕೆಲಸಕ್ಕಿದ್ದಾರೆ. ಜನವರಿ 1ರ ರಾತ್ರಿ 2.50ಕ್ಕೆ ಅವರು ಬೈಕಿನಲ್ಲಿ ಹೋಗುತ್ತಿದ್ದರು. ತಾರಿಮಕ್ಕಿ ಕ್ರಾಸಿನಲ್ಲಿ ರಸ್ತೆ ಮೇಲೆ ಜನರ ಗುಂಪು ನಿಂತಿದ್ದು, `ದಾರಿ ಬಿಡಿ’ ಎಂದು ಅವರು ಮನವಿ ಮಾಡಿದರು.
ಇದರಿಂದ ಸಿಟ್ಟಾದ 9 ಜನ ಮೈ-ಕೈ-ಮುಖ ನೋಡದೇ ಎಲ್ಲೆಂದರಲ್ಲಿ ಬಾರಿಸಿದರು. ಕಾಲಿನಿಂದ ತುಳಿದು ನೋವು ಮಾಡಿದರು. ಆದರೆ, ದಾಳಿ ಮಾಡಿದವರು ಯಾರು? ಎಂದು ಗೊತ್ತಾಗಲಿಲ್ಲ. ಅವರು ಪರಿಚಿತರೂ ಆಗಿರಲಿಲ್ಲ. `ಆ ದುಷ್ಕರ್ಮಿಗಳನ್ನು ಹುಡುಕಿ ನ್ಯಾಯ ಕೊಡಿಸಿ’ ಎಂದು ವಿರಾಜ ಕವರಿ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.



