ಭಟ್ಕಳ: ಮುರುಡೇಶ್ವರದ ವೆಂಕಟದಾಸ ಕಾಮತ್ ಅವರು ಗ್ರಾ ಪಂ ಕಟ್ಟಡ ಧ್ವಂಸ ಮಾಡಿದ ಬಗ್ಗೆ ಮಾವಳ್ಳಿ-2 ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಅಪರ್ಣ ನಾಯ್ಕ ಪೊಲಿಸ್ ದೂರು ನೀಡಿದ್ದಾರೆ.
`ಮಾವಳ್ಳಿಯ ಸರ್ವೇ ನಂ 23ರಲ್ಲಿ ಗ್ರಾಮ ಪಂಚಾಯತ ಅಂಗಡಿಗಳಿದ್ದು, ಮಳಿಗೆ ಸಂಖ್ಯೆ 14ರ ವಿಷಯ ನ್ಯಾಯಾಲಯದ ಮೆಟ್ಟಿಲೇರಿದೆ. ನ್ಯಾಯಾಲಯದಲ್ಲಿ ವಿಚಾರಣೆ ಬಾಕಿಯಿರುವಾಗಲೇ ಮಳಿಗೆ ಧ್ವಂಸ ಮಾಡಲಾಗಿದೆ. ವೆಂಕಟದಾಸ ಕಾಮತ್ ಅವರು ಮಳಿಗೆಯನ್ನು ಕೆಡವಿದ್ದಾರೆ’ ಎಂಬುದು ಅಪರ್ಣಾ ಅವರ ದೂರು.
`ಈ ಜಾಗದಲ್ಲಿ ಬೇರೇನೂ ಮಾರ್ಪಾಡು ಮಾಡದಂತೆ ಅವರಿಗೆ ಸೂಚನೆ ನೀಡಬೇಕು’ ಎಂದು ಅಪರ್ಣಾ ಅವರು ಒತ್ತಾಯಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.



