ಭಟ್ಕಳ: ನಡೆದು ಹೋಗುತ್ತಿದ್ದ ವೃದ್ಧೆಗೆ ಖಾಸಗಿ ಬಸ್ಸು ಗುದ್ದಿದ್ದು, ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜನವರಿ 6ರಂದು ಶಿರಾಲಿ ಚಿತ್ರಾಪುರದ ಲಕ್ಷ್ಮೀ ಜಟ್ಟ ನಾಯ್ಕ ಅವರು ನ್ಯಾಯವಾದಿಯೊಬ್ಬರನ್ನು ಭೇಟಿ ಮಾಡಿ ಮನೆಗೆ ತೆರಳುತ್ತಿದ್ದರು. ಇದಕ್ಕಾಗಿ ಅವರು ಸಂಶುದ್ದೀನ್ ಸರ್ಕಲ್ ಹೆದ್ದಾರಿ ಅಂಚಿನಲ್ಲಿ ನಡೆದು ಹೋಗುತ್ತಿದ್ದರು.
ಆಗ ಅವರಿಗೆ ಬಸ್ಸು ಡಿಕ್ಕಿಯಾಗಿದೆ. ಗಾಯಗೊಂಡ ಲಕ್ಷ್ಮೀ ನಾಯ್ಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.