ಶಿರಸಿ: ಬನವಾಸಿ ಮಧುಕೇಶ್ವರ ದೇವಾಲಯದ ಮಹಾನಂದಿ ವಿಗ್ರಹ ರಕ್ಷಣೆಗೆ 2020ರಲ್ಲಿ ಡಾ ರವಿಕಿರಣ ಪಟವರ್ಧನ್ ಪ್ರಧಾನಿ ಕಚೆರಿಗೆ ಪತ್ರ ಬರೆದಿದ್ದು, ಆ ವಿಷಯಕ್ಕೆ ಸರ್ಕಾರ ಮನ್ನಣೆ ನೀಡಿದೆ.
ಈ ಪತ್ರದ ಅನ್ವಯ ತಜ್ಞರ ತಂಡ ಬನವಾಸಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಆ ವೇಳೆ ವಿಗ್ರಹದ ಕಾಲು ಸವಕಳಿ ಆಗುತ್ತಿರುವುದು ಕಂಡು ಬಂದಿದ್ದು, ಅದು ಶಿಥಿಲವಾಗದಂತೆ ಇದೀಗ ಎಚ್ಚರಿಕೆವಹಿಸಲಾಗಿದೆ. `ಭಕ್ತರು ಸಹ ನಂದಿಯ ಕಾಲು ಸ್ಪರ್ಶಿಸದೇ ದೂರದಿಂದಲೇ ಕೈ ಮುಗಿಯಬೇಕು. ಆಗ ಅನಾಧಿಕಾಲದ ಈ ನಂದಿ ವಿಗ್ರಹವನ್ನು ಮುಂದಿನ ತಲೆಮಾರಿಗೂ ಉಳಿಸಲು ಸಾಧ್ಯ’ ಎಂದು ಡಾ ರವಿಕಿರಣ ಪಟವರ್ಧನ್ ಅವರು ಹೇಳಿದ್ದಾರೆ.
`ಪುರಾತತ್ವ ಇಲಾಖೆಯವರು ನಂದಿ ಸುತ್ತ ರಕ್ಷಣಾ ಮೇಲಿ ಅಳವಡಿಸಿದರೆ ಅಲ್ಲಿನ ಮೆರಗು ಹೆಚ್ಚಲಿದೆ. ವಿಗ್ರಹಕ್ಕೆ ಅಭಿಷೇಕ ಮುಗಿದ ನಂತರ ಮೂರ್ತಿಯನ್ನು ಸ್ವಚ್ಛ ಮಾಡಿದರೆ ಮತ್ತಷ್ಟು ಅನುಕೂಲ’ ಎಂದವರು ಅಭಿಪ್ರಾಯಪಟ್ಟಿದ್ದಾರೆ.