ಶಿರಸಿ: ಪ್ರಜ್ಞಾ ಹೆಗಡೆ ಹಾಗೂ ಅವರ ತಂದೆ ದತ್ತಾತ್ರೇಯ ಹೆಗಡೆ ಸಂಚರಿಸುತ್ತಿದ್ದ ಸ್ಕೂಟರಿಗೆ ಸೂರಜ್ ರೇವಣಕರ ತನ್ನ ಬೈಕು ಗುದ್ದಿದ್ದು, ಬೈಕಿನ ಹಿಂದೆ ಕೂತಿದ್ದ ಸುನೀಲ ಆಚಾರಿಯೂ ಸೇರಿ ನಾಲ್ವರು ಬಿದ್ದು ಗಾಯಗೊಂಡಿದ್ದಾರೆ.
ಶಿರಸಿ ಸಾಲ್ಕಣಿ ತಟ್ಟಿಸರ ಕಟಕಿನಬೈಲ್’ನ ದತ್ತಾತ್ರೇಯ ಹೆಗಡೆ ಅವರು ಜನವರಿ 5ರಂದು ತಮ್ಮ ಮಗಳು ಪ್ರಜ್ಞಾ ಹೆಗಡೆ ಅವರ ಜೊತೆ ಸ್ಕೂಟರಿನಲ್ಲಿ ಹೋಗುತ್ತಿದ್ದರು. ಶಿರಸಿ-ಹುಲೇಕಲ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಅವರಿಗೆ ಕಲಗಾರಿನಲ್ಲಿ ಎದುರಿನಿಂದ ವೇಗವಾಗಿ ಬೈಕ್ ಓಡಿಸಿಕೊಂಡು ಬಂದ ಶಾಂತಿನಗರದ ಸೂರಜ್ ರೇವಣಕರ ಅವರ ಬೈಕು ಡಿಕ್ಕಿಯಾಯಿತು.
ಈ ಅಪಘಾತದ ಪರಿಣಾಮ ಸ್ಕೂಟರಿನಲ್ಲಿದ್ದ ದತ್ತಾತ್ರೇಯ ಹೆಗಡೆ, ಪ್ರಜ್ಞಾ ಹೆಗಡೆ ಜೊತೆ ಬೈಕಿನಲ್ಲಿದ್ದ ಸುರಜ್ ರೇವಣಕರ ಹಾಗೂ ಅವರ ಜೊತೆಯಿದ್ದ ಸುನೀಲ ಆಚಾರಿ ಸಹ ನೆಲಕ್ಕೆ ಬಿದ್ದರು. ಎಲ್ಲರೂ ಗಾಯಗೊಂಡಿದ್ದು, ಪ್ರಜ್ಞಾ ಹೆಗಡೆ ಅವರು ಸಿಟಿ ಸ್ಕಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತಕ್ಕೆ ಕಾರಣನಾದ ಸೂರಜ್ ವಿರುದ್ಧ ಅವರು ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.