ಕಾರವಾರ: ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಸುಭಾಷ ಗುನಗಿ ಆಯ್ಕೆಯಾಗಿದ್ದಾರೆ. ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿರುವ ಸುಭಾಷ ಗುನಗಿ ಅವರನ್ನು ಮತ್ತೊಮ್ಮೆ ಅದೇ ಹುದ್ದೆಯಲ್ಲಿ ಮುಂದುವರೆಸಲಾಗಿದೆ.
ರಿಕ್ಷಾ ಚಾಲಕರಾಗಿರುವ ಸುಭಾಷ ಗುನಗಿ ಎಲ್ಲರ ಜೊತೆ ಉತ್ತಮ ಬಾಂದವ್ಯ ಹೊಂದಿದ್ದಾರೆ. ಸಾಮಾಜಿಕ ಚಟುವಟಿಕೆ ಹಾಗೂ ಸಂಘಟನೆಗಾಗಿ ಶ್ರಮಿಸಿದನ್ನು ಪರಿಗಣಿಸಿ ಅವರನ್ನು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷರನ್ನಾಗಿಸಿತ್ತು. ಎಲ್ಲರನ್ನು ವಿಶ್ವಾಸಕ್ಕೆಪಡೆದು ಮುನ್ನಡೆಯುವ ಅವರ ಕಾರ್ಯವೈಖರಿ ಗಮನಿಸಿ ಇದೀಗ ಮೂರನೇ ಅವಧಿಗೆ ಅದೇ ಹುದ್ದೆಯನ್ನು ಅವರನ್ನು ಮುಂದುವರೆಸಲಾಗಿದೆ.
`ಕಾರವಾರ ಗ್ರಾಮೀಣ ಭಾಗದಲ್ಲಿ ಬಿಜೆಪಿ ಪಕ್ಷ ಸದೃಡವಾಗಲು ಸುಭಾಷ್ ಗುನಗಿ ಪಾತ್ರ ಮುಖ್ಯವಾಗಿದೆ. ಅವರನ್ನ ಬಿಜೆಪಿ ಪಕ್ಷ ಮೂರನೇ ಬಾರಿಗೆ ಗ್ರಾಮೀಣ ಘಟಕದ ಅಧ್ಯಕ್ಷರನ್ನಾಗಿ ಮಾಡಿದ್ದು ಖುಷಿ ತಂದಿದೆ. ರಾಜಕೀಯವಾಗಿ ಅವರು ಇನ್ನು ಉನ್ನತ ಮಟ್ಟದಲ್ಲಿ ಬೆಳೆಯಲಿ’ ಎಂದು ಜಯಕರ್ನಾಟಕ ಜನಪರ ವೇದಿಕೆ ಹಾಗೂ ಉತ್ತರ ಕನ್ನಡ ಜಿಲ್ಲಾ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ದಿಲೀಪ್ ಅರ್ಗೇಕರ್ ಹೇಳಿದ್ದಾರೆ.