ಅಂಕೋಲಾ: ಅಂಕೋಲಾದಿ0ದ ಕುಮಟಾ ಕಡೆ ಬೈಕಿನಲ್ಲಿ ಹೋಗುತ್ತಿದ್ದ ಪೊಲೀಸ್ ಸಿಬ್ಬಂದಿ ಮನೋಜ ಡಿ ಅವರಿಗೆ ಹಿಂದಿನಿoದ ಕಾರು ಗುದ್ದಿದೆ. ಅಪಘಾತದ ಬಗ್ಗೆ ಪೊಲೀಸ್ ದೂರು ದಾಖಲಾಗದಿರುವುದನ್ನು ನೋಡಿದ ಔಷಧ ವಿತರಕ ಜೈವಂತ ನಾಯ್ಕ ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
ಜನವರಿ 3ರಂದು ಪೊಲೀಸ್ ಕಾನ್ಸಟೇಬಲ್ ಮನೋಜ ಡಿ (28) ಅವರು ಬೈಕಿನಲ್ಲಿ ಹೋಗುತ್ತಿದ್ದರು. ಜೋರಾಗಿ ಕಾರು ಓಡಿಸಿಕೊಂಡು ಬಂದ ಹುಬ್ಬಳ್ಳಿಯ ಶೀತಲ ಮೇಲಾನಿ ಬೆಳಸೆ ರೈಲು ಸೇತುವೆ ಬಳಿ ಅವರ ಬೈಕಿಗೆ ತಮ್ಮ ಕಾರು ಗುದ್ದಿದರು. ಚಲಿಸುತ್ತಿದ್ದ ಬೈಕಿಗೆ ಹಿಂದಿನಿoದ ಕಾರು ಗುದ್ದಿದ್ದು, ಮನೋಜ ಅವರ ಕೈ’ಗೆ ಪೆಟ್ಟಾಯಿತು.
ಮೂರು ದಿನ ಕಳೆದರೂ ಈ ಅಪಘಾತದ ಬಗ್ಗೆ ಪೊಲೀಸ್ ದೂರು ದಾಖಲಾಗಿರಲಿಲ್ಲ. ಈ ಬಗ್ಗೆ ಅರಿತ ತೆಂಗಣಗೇರಿಯ ವಿಜೇತ ನಾಯ್ಕ ಅವರು ಕಾರು ಚಾಲಕನ ದುಡುಕುತನದಿಂದ ಅಪಘಾತ ನಡೆದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಆ ಕಾರು ಚಾಲಕನ ವಿರುದ್ಧ ಪ್ರಕರಣವನ್ನು ದಾಖಲಿಸಿದರು.