ಹೊನ್ನಾವರ: ಕಾರು ಹಾಗೂ ಲಾರಿ ನಡುವೆ ಅಪಘಾತ ನಡೆದ ಪರಿಣಾಮ ರಸ್ತೆ ಅಂಚಿನಲ್ಲಿ ನಿಂತಿದ್ದ ಮೂವರಿಗೆ ಸೇರಿ ಒಟ್ಟು ಐದು ಜನರಿಗೆ ಪೆಟ್ಟಾಗಿದೆ. ಈ ಅಪಘಾತಕ್ಕೆ ಕಾರಣರಾದ ಲಾರಿ ಹಾಗೂ ಕಾರು ಚಾಲಕನ ವಿರುದ್ಧ ನಾಗರಾಜ ಅವರು ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.
ಜನವರಿ 5ರ ರಾತ್ರಿ ಹೊನ್ನಾವರ ಕಾಸರಗೋಡು ಟೊಂಕಾ ಕ್ರಾಸಿನಲ್ಲಿ ನಾಗರಾಜ ಹಾಗೂ ವಿವೇಕ ನಿಂತಿದ್ದರು. ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಜೋರಾಗಿ ಬಂದ ಲಾರಿಗೆ ಕಾಸರಕೋಡು ಟೊಂಕ ಕಡೆಯಿಂದ ಟೊಂಕಾ ಕ್ರಾಸಿನ ಕಡೆ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆಯಿತು. ಅದಾದ ನಂತರ ಆ ಕಾರು ರಸ್ತೆ ಅಂಚಿನಲ್ಲಿ ನಿಂತಿದ್ದ ನಾಗರಾಜ ಅವರ ಬೈಕಿಗೆ ಗುದ್ದಿತು.
ಕಾರು ಗುದ್ದಿದ ಪರಿಣಾಮ ನಾಗರಾಜ, ವಿವೇಕ ಹಾಗೂ ಅವರ ಜೊತೆಯಲ್ಲಿದ್ದ ಕಿರಣಕುಮಾರ ಗಾಯಗೊಂಡರು. ಲಾರಿ ಹಾಗೂ ಕಾರಿನ ನಡುವೆ ನಡೆದ ಅಪಘಾತದಿಂದಾಗಿ ಕಾರಿನಲ್ಲಿದ್ದ ಹೊನ್ನಾವರದ ಕರ್ಕಿನಾಡದ ಅನಂತಮೂರ್ತಿ ಶಾಸ್ತ್ರಿ ಹಾಗೂ ರಾಹುಲ್ ಅನಂತಮೂರ್ತಿ ಪೆಟ್ಟು ಮಾಡಿಕೊಂಡರು. ಕಾರಿನ ಚಾಲಕ ಅನಂತಮೂರ್ತಿ ಹಾಗೂ ಕೇರಳದ ಲಾರಿ ಚಾಲಕ ಸಾಜಿ ಅಬ್ರಾಹಿಂ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.



