ಕಾರವಾರ: ಅಂಕೋಲಾದಿoದ ಕಾರವಾರ ಕಡೆ ಚಲಿಸುತ್ತಿದ್ದ ಬಿಳಿ ಬಣ್ಣದ ಕಾರು ಗಣೇಶ ಮಾಹೇಕರ್ ಹಾಗೂ ಸಂಜು ಗೌಡ ಅವರಿಗೆ ಗುದ್ದಿದೆ. ತೋಡೂರು ಪಂಚಾಯತ ಸಮೀಪ ಈ ಅಪಘಾತವಾಗಿದೆ. ರಸ್ತೆ ಅಂಚಿನಲ್ಲಿ ಸ್ಕೂಟಿ ನಿಲ್ಲಿಸಿಕೊಂಡು ಮಾತನಾಡುತ್ತಿದ್ದವರಿಗೆ ಕಾರು ಡಿಕ್ಕಿಯಾಗಿದೆ. ಬಿಳಿ ಬಣ್ಣದ ಕಾರು ಚಾಲಕ ಕಾರು ನಿಲ್ಲಿಸದೇ ಪರಾರಿಯಾಗಿದ್ದು, ಗಾಯಗೊಂಡವರು ಆಸ್ಪತ್ರೆ ಸೇರಿದ್ದಾರೆ. ಆ ಕಾರು ಸ್ಕೂಟಿಗೂ ಡಿಕ್ಕಿ ಹೊಡೆದಿದ್ದರಿಂದ ವಾಹನ ಜಖಂ ಆಗಿದೆ. ಅಪರಿಚಿತ ಕಾರು ಚಾಲಕನ ವಿರುದ್ಧ ನೌಕಾನೆಲೆ ಉದ್ಯೋಗಿ ಹರೀಶ ಮಾಹೇಕರ್ ಪೊಲೀಸ್ ದೂರು ನೀಡಿದ್ದಾರೆ.
ಸೈಕಲಿಗೆ ಗುದ್ದಿದ ಬೈಕು: ಗಾಯ
ಹಳಿಯಾಳ: ಕೆಕೆ ಹಳ್ಳಿಯ ಮಲ್ಲೇಶಿ ಬಾಂದುರ್ಗಿ ಅವರು ಚಲಾಯಿಸುತ್ತಿದ್ದ ಬೈಕು ಜೋಗಿನಕೊಪ್ಪದ ರಮೇಶ ಬೆಳಗಾಂವ್ಕರ್ ಅವರು ಚಲಾಯಿಸುತ್ತಿದ್ದ ಸೈಕಲಿಗೆ ಡಿಕ್ಕಿಯಾಗಿದೆ. ಬೈಕಿನ ಹಿಂಬದಿ ಸವಾರರಾಗಿದ್ದ ಅಮ್ಮನಕೊಪ್ಪದ ಸಾಗರ ಸಾಂಬ್ರಾಣಿಕರ ಹಾಗೂ ಸೈಕಲ್ ಓಡಿಸುತ್ತಿದ್ದ ರಮೇಶ ಬೆಳಗಾಂವ್ಕರ್ ಅವರಿಗೆ ಗಾಯವಾಗಿದೆ. ಜನವರಿ 5ರಂದು ಮಲ್ಲೇಶಿ ಅವರು ಹೊಸಹಡಗಲಿಯಿಂದ ಹಳಿಯಾಳ ಕಡೆ ಬೈಕಿನಲ್ಲಿ ಹೊರಟಿದ್ದರು. ರಮೇಶ ಅವರು ಹಳಿಯಾಳದಿಂದ ಜೋಗಿಕೊಪ್ಪ ಕಡೆ ಹೊರಟಿದ್ದರು. ಕಲಘಟಕಿ ರಸ್ತೆಯಲ್ಲಿ ಈ ಅಪಘಾತ ನಡೆದಿದೆ. ಎರಡು ವಾಹನಗಳು ಜಖಂ ಆಗಿದೆ.
ಕಾರಿಗೆ ಗುದ್ದಿದ ಬೈಕು: ಇಬ್ಬರಿಗೆ ಗಾಯ
ಶಿರಸಿ: ಶಿರಸಿಯಿಂದ ಹುತ್ಗಾರ ಕಡೆ ಹೋಗುತ್ತಿದ್ದ ಕಲಗಾರವಡ್ಡದ ಚಂದ್ರಶೇಖರ ಭಟ್ಟ ಅವರ ಕಾರಿಗೆ ಹೆಸ್ಕಾಂ ಕೆಲಸಗಾರ ಹರೀಶ ನಾಯ್ಕ ಬೈಕ್ ಗುದ್ದಿದ್ದಾರೆ. ಇದರಿಂದ ಬೈಕಿನಲ್ಲಿದ್ದ ಹರೀಶ ನಾಯ್ಕರ ಜೊತೆ ಹಿಂಬದಿ ಸವಾರ ಕೃಷ್ಣ ನಾಯ್ಕರು ಗಾಯಗೊಂಡಿದ್ದಾರೆ. ಹುತ್ಕಾರ ಗ್ರಾಮದ ಹಾಲಳ್ಳಿ ಕೋಳಿ ಪಾರಂ ಬಳಿ ಜನವರಿ 6ರಂದು ಈ ಅಪಘಾತ ನಡೆದಿದೆ. ಹೊನ್ನಾವರ ಮೂಲದ ಹರೀಶ ನಾಯ್ಕ ಸದ್ಯ ಶಿರಸಿ ನಿಲೇಕೇಣಿಯಲ್ಲಿ ವಾಸವಾಗಿದ್ದು, ಹುಲೆಕಲ್’ನಿಂದ ಶಿರಸಿ ಕಡೆ ಬರುವಾಗ ಬೈಕು ಕಾರಿಗೆ ಡಿಕ್ಕಿಯಾಗಿದೆ. ಸವಾರರಿಬ್ಬರು ಗಾಯಗೊಂಡು ವಾಹನ ಜಖಂ ಆದ ಬಗ್ಗೆ ಚಂದ್ರಶೇಖರ ಭಟ್ಟರು ಪೊಲೀಸ್ ದೂರು ನೀಡಿದ್ದಾರೆ.