ಯಲ್ಲಾಪುರ: ಸ್ವರ್ಣವಲ್ಲಿಯ ಗಂಗಾಧರೇ0ದ್ರ ಸರಸ್ವತಿ ಸ್ವಾಮೀಜಿ ರಾಜ್ಯದ ಎಲ್ಲಡೆ ಸಂಚರಿಸಿ ಭಗವದ್ಗೀತಾ ಅಭಿಯಾನ ನಡೆಸುತ್ತಿದ್ದಾರೆ. ಈ ಅಭಿಯಾನದ ಪರಿಣಾಮ ಜಡ್ಡಿಪಾಲಿನ ಪುಟ್ಟ ಬಾಲಕಿ ಶ್ರಾವಣಿ ಸಹ ನಿರರ್ಗಳವಾಗಿ ಭಗವದ್ಗೀತೆ ಉಚ್ಚರಿಸುತ್ತಾರೆ.
ಯಲ್ಲಾಪುರ ತಾಲೂಕಿನ ದೆಹಳ್ಳಿ ಬಳಿಯ ಕಟ್ಟಿಗೆ ಗ್ರಾಮದಲ್ಲಿ ಗಣೇಶ ಜಡ್ಡಿಪಾಲ ಅವರು ವಾಸಿಸುತ್ತಾರೆ. ಅವರದ್ದು 15 ಜನರ ಅವಿಭಕ್ತ ಕುಟುಂಬ. ನಿತ್ಯ ಸಂಜೆ ಈ ಮನೆಯಲ್ಲಿ ಎಲ್ಲರೂ ಸೇರಿ ಭಜನೆ ಮಾಡುವುದು ಮೊದಲಿನಿಂದ ಬಂದ ಸಂಪ್ರದಾಯ. ಗಣೇಶ ಅವರ ಮೂರನೇ ಪುತ್ರಿ ಶ್ರಾವಣಿ ಈ ಮನೆಯ ಕಿರಿಯ ಸದಸ್ಯೆ. ಹೀಗಾಗಿ ಶ್ರಾವಣಿ ಮಲಗುವಾಗ ಶ್ಲೋಕ-ಭಜನೆ ಹೇಳುವುದು ಕಡ್ಡಾಯ!
ಭಗವದ್ಗೀತೆಯ ಅಭಿಯಾನದ ಅಂಗವಾಗಿ ಈಚೆಗೆ ಕಲ್ಪಾಲುವಿನಲ್ಲಿ ಭಗವದ್ಗೀತಾ ಸಪ್ತಾಹ ನಡೆಯಿತು. ಆ ಸಪ್ತಾಹದಲ್ಲಿ ಭಾಗವಹಿಸಿದ ಗಾಯತ್ರಿ ಜಡ್ಡಿಪಾಲ್ ಅವರು ತಮ್ಮ ಮೊಮ್ಮಗಳು ಶ್ರಾವಣಿಯನ್ನು ಜೊತೆಗೆ ಕರೆದೊಯ್ಯುತ್ತಿದ್ದರು. ಏಳು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರಾವಣಿ ಅವರಿಗೆ ಭಗವದ್ಗೀತೆ ಮನನವಾಯಿತು. ತಾಯಿ ಪಾರ್ವತಿ ಜಡ್ಡಿಪಾಲ್ ಅವರ ಜೊತೆ ಭಗವದ್ಗೀತೆ ಶ್ಲೋಕಗಳನ್ನು ಹೇಳುತ್ತಿದ್ದ ಪರಿಣಾಮ ಪುಠಾಣಿ ಶ್ರಾವಣಿ ಅವರಿಗೂ ಭಗವದ್ಗೀತೆ ಬಗ್ಗೆ ಅಪಾರ ಪ್ರೀತಿ ಬೆಳೆಯಿತು. ಅದರ ಪರಿಣಾಮವಾಗಿ ಭಗವದ್ಗೀತೆ 9ನೇ ಅಧ್ಯಾಯದ 27 ಶ್ಲೋಕಗಳನ್ನು ಅವರು ನಿರರ್ಗಳ ಹೇಳುತ್ತಾರೆ. ಉಳಿದ ಅಧ್ಯಾಯಗಳನ್ನು ಅಭ್ಯಯಿಸುವುದು ಸಹ ಅವರಿಗೆ ಅಷ್ಟೇ ಸಲೀಸು!
ಇನ್ನೂ ಕಟ್ಟಿಗೆ ಗ್ರಾಮದಲ್ಲಿನ ಮಹಿಳಾ ಮಂಡಳದವರು ಕಾರ್ತಿಕ ಮಾಸದಲ್ಲಿ ವಾರಕ್ಕೆ ಒಮ್ಮೆ ಭಜನಾ ಕಾರ್ಯಕ್ರಮ ನಡೆಸುತ್ತಾರೆ. ಬೇರೆ ಬೇರೆಯವರ ಮನೆಗಳಿಗೆ ತೆರಳಿ ಗಂಟೆಗಳ ಕಾಲ ಭಜನೆ ಮಾಡುತ್ತಾರೆ. ಅಲ್ಲಿಯೂ ಪುಠಾಣಿ ಶ್ರಾವಣಿ ಜಡ್ಡಿಪಾಲ್ ಅವರ ಹಾಜರಾತಿ ಇದ್ದೇ ಇರುತ್ತದೆ. ಹೀಗಾಗಿ ಶ್ರಾವಣಿ ಅವರಿಗೆ ಗಣೇಶ ಪಂಚರತ್ನ, ಶಾರದಾ ಭುಜಂಗ ಸ್ತೋತ್ರ, ಗುರು ಅಷ್ಟಕ ಸೇರಿ ಹಲವು ಬಗೆಯ ಶ್ಲೋಕಗಳು ಕಂಠಪಾಠವಾಗಿದೆ. `ಸ್ವರ್ಣವಲ್ಲಿ ಶ್ರೀಗಳು ನಡೆಸಿದ ಭಗವದ್ಗೀತಾ ಅಭಿಯಾನ ಮಗುವಿನ ಮೇಲೆ ಅಗಾದವಾದ ಪ್ರಭಾವ ಬೀರಿದೆ’ ಎಂದು ಶ್ರಾವಣಿ ಅವರ ತಂದೆ ಗಣೇಶ ಜಡ್ಡಿಪಾಲ್ ಅನಿಸಿಕೆ ಹಂಚಿಕೊoಡರು.
ತುಳಸಿ ಮಾಲೆ ಕಟ್ಟುತ್ತ ಭಗವದ್ಗೀತೆ ಹೇಳಿಕೊಡುವ ಪುಠಾಣಿ ಶ್ರಾವಣಿಯ ವಿಡಿಯೋ ಇಲ್ಲಿ ನೋಡಿ..