ಹಳಿಯಾಳ: ಮಟ್ಕಾ ಆಟದಲ್ಲಿ ನಿರತರಾಗಿದ್ದವರ ಮೇಲೆ ದಾಳಿ ನಡೆಸಿದ ಸಿಇಎನ್ ಪೊಲೀಸ್ ಠಾಣೆಯ ಉಪಾಧ್ಯಕ್ಷೆ ಬಿ ಅಶ್ವನಿ ಒಟ್ಟು ಐದು ಜನರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ಹಳಿಯಾಳ ಬಸ್ ನಿಲ್ದಾಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಟ್ಕಾ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನಲೆ ಜ 6ರಂದು ಅವರು ಕಾರವಾರದಿಂದ ಹಳಿಯಾಳಕ್ಕೆ ತೆರಳಿದ ಅಶ್ವಿನಿ ಅವರು ಅಲ್ಲಿನ ಗೂಡಂಗಡಿಗಳ ಮೇಲೆ ನಿಗಾ ಇರಿಸಿದ್ದರು.
ಆಗ ಟೇಲರಿಂಗ್ ಕೆಲಸ ಮಾಡುವ ದರ್ಶನ ಪಾಟೀಲ, ಗೂಡಂಗಡಿ ನಡೆಸುವ ಮಾನ್ವಿನ್ ಡಿಸೋಜಾ, ಲೋಮಣ್ಣ ಬೆಳಗಾಂವ್ಕರ್, ದರ್ಶನ್ ಕಾಂಬಳೆ ಹಾಗೂ ಮಂಜುನಾಥ ಕೋಳಿಪುಚ್ಚ ಮಟ್ಕಾ ಆಟಕ್ಕಾಗಿ ಹಣ ಸಂಗ್ರಹಿಸುವುದನ್ನು ಅವರು ಗಮನಿಸಿದರು. ಕೂಡಲೇ ತಮ್ಮ ಸಿಬ್ಬಂದಿ ಜೊತೆ ದಾಳಿ ನಡೆಸಿದರು. ಮಟ್ಕಾ ಸಾಮಗ್ರಿ, ಹಣ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು.