ಯಲ್ಲಾಪುರ: ಅಕ್ಕಿ ಆಲೂರಿನಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಎತ್ತುಗಳನ್ನು ಯಲ್ಲಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಾವೇರಿಯ ಪಕ್ಕಿರೇಶ ದೊಡ್ಡಮನಿ ಹಾಗೂ ಮಂಜು ಹರಿಜನ ಸೇರಿಕೊಂಡು ಬುಲೇರೋ ವಾಹನದದಲ್ಲಿ ಆರು ಎತ್ತುಗಳನ್ನು ಸಾಗಿಸುತ್ತಿದ್ದರು. ಹೋಲಿ ರೋಜರಿ ಶಾಲೆ ಮುಂದೆ ಪಿಎಸ್‌ಐ ಶೇಡಜಿ ಚೌಹಾಣ್ ಆ ವಾಹನ ತಡೆದರು.
ಬುಲೆರೋ ಒಳಗೆ 2 ಲಕ್ಷ ರೂ ಮೌಲ್ಯದ ಜಾನುವಾರುಗಳ ಸಾಗಾಟ ಪತ್ತೆಯಾಗಿದ್ದು, ಅದಕ್ಕೆ ಸಂಬ0ಧಿಸಿದ ದಾಖಲೆಗಳನ್ನು ಪ್ರಶ್ನಿಸಿದರು. ದಾಖಲೆ ಒದಗಿಸಲು ಚಾಲಕ ಹಾಗೂ ಕ್ಲೀನರ್ ತಡವರಿಸಿದರು. ಜೊತೆಗೆ ಎತ್ತುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿರುವುದನ್ನು ಅವುಗಳನ್ನು ವಶಕ್ಕೆ ಪಡೆದರು.
ಆರು ಎತ್ತುಗಳನ್ನು ರಕ್ಷಿಸಿದ ಪೊಲೀಸರು ಅದನ್ನು ಕರಡೊಳ್ಳಿ ಗೋಶಾಲೆಗೆ ಬಿಟ್ಟು ಬಂದರು. ಹೆದ್ದಾರಿ ಮೂಲಕ ಬಂದರೂ ಎಲ್ಲಿಯೂ ಸಿಕ್ಕಿ ಬೀಳದ ಅಕ್ರಮ ಜಾನುವಾರು ಸಾಗಾಟಗಾರರನ್ನು ಯಲ್ಲಾಪುರ ಪೊಲೀಸರು ಪತ್ತೆ ಮಾಡಿದಕ್ಕಾಗಿ ಜನರು ಸಂತಸ ವ್ಯಕ್ತಪಡಿಸಿದರು.