ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಜರುಗುತ್ತಿರುವ ಅರ್ಜಿಗಳ ಪುನರ್ ಪರಿಶೀಲನಾ ನಿಯಮದಲ್ಲಿನ ಆಕ್ಷೇಪವನ್ನ ಪರಿಶೀಲಿಸಿ ತುರ್ತು ವರದಿ ಮಂಡಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲೀನಿ ರಜನೀಶ ಅವರು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.
ಮಂಗಳವಾರ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ನ್ಯಾಯವಾದಿ ರವೀಂದ್ರ ನಾಯ್ಕ ಮುಖ್ಯಮಂತ್ರಿ ಗೃಹ ಕಛೇರಿ ಕೃಷ್ಣಾದಲ್ಲಿ ಭೇಟಿಯಾದರು. `ರಾಜ್ಯಮಟ್ಟದ ಅರಣ್ಯ ಹಕ್ಕು ಕಾಯಿದೆ ಅನುಷ್ಠಾನ ಮೇಲ್ಚಿಚಾರಣಾ ಸಮಿತಿಯ ನಿರ್ಣಯಿಸಿದ ನಡುವಳಿಕೆಗಳಿಗೆ ಆಕ್ಷೇಪಣಾ ಪತ್ರ ಸಲ್ಲಿಸಿದರು. ಈ ಹಿನ್ನಲೆ ಶಾಲೀನಿ ರಜನೀಶ ಅವರು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿದರು.
ರವೀಂದ್ರ ನಾಯ್ಕ ಅವರು ಕಾನೂನಿಗೆ ವ್ಯತಿರಿಕ್ತವಾಗಿ ಅರ್ಜಿ ಪರಿಶೀಲನೆ ಆಗುತ್ತಿರುವ ಕ್ರಮ ಮತ್ತು ಮೂರು ತಲೆಮಾರಿನ ನಿರ್ದಿಷ್ಟ ದಾಖಲೆಗೆ ಒತ್ತಾಯಿಸುತ್ತಿರುವ ಅಂಶವನ್ನು ಆಕ್ಷೇಪಣಾ ಪತ್ರದಲ್ಲಿ ಪ್ರಸ್ತಾಪಿಸಿದ್ದರು.
ನ್ಯಾಯವಾದಿ ಜೊತೆ ನಿವೃತ್ತ ನ್ಯಾಯಾಧೀಶರ ಮಾತುಕಥೆ
`ಅರಣ್ಯ ಹಕ್ಕು ಕಾಯಿದೆ ಅರ್ಜಿಯ ಪುನರ್ ಪರಿಶೀಲನಾ ದೋಷಯುಕ್ತ ಪ್ರಕ್ರಿಯೆ ಸರ್ಕಾರ ಸರಿಪಡಿಸದ್ದಿದ್ದಲ್ಲಿ ಇದರ ವಿರುದ್ಧ ಉಚ್ಛನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ದಾಖಲಿಸಿ’ ಎಂದು ವಿಶ್ರಾಂತ ನ್ಯಾಯಮೂರ್ತಿ ಎಚ್ ಎನ್.ನಾಗಮೋಹನದಾಸ್ ಸಲಹೆ ನೀಡಿದ್ದಾರೆ.
ಅರಣ್ಯವಾಸಿಗಳ ಅರ್ಜಿ ಪುನರ್ ಪರಿಶೀಲನೆಯ ಸಂದರ್ಭದಲ್ಲಿ ಉಂಟಾಗಿರುವ ಕಾನೂನು ಸಮಸ್ಯೆಗಳ ಕುರಿತು ರವೀಂದ್ರ ನಾಯ್ಕ ಅವರ ಜೊತೆ ಚರ್ಚಿಸಿದ್ದು, `ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿ ಪರವಾಗಿದ್ದು ಕಾನೂನಿಗೆ ವ್ಯತಿರಿಕ್ತವಾಗಿ ಮತ್ತು ಕಾನೂನಿನ ವಿಧಿವಿಧಾನ ಅನುಸರಿಸದೇ ಮಂಜೂರಿ ಪ್ರಕ್ರಿಯೆ ಜರುಗುತ್ತಿದೆ’ ಎಂದು ವಿವರಿಸಿದರು. `ಪೂರ್ಣ ಪ್ರಮಾಣದ ಅಸ್ತಿತ್ವದ ಹಾಗೂ ಅರಣ್ಯವಾಸಿಯ ವ್ಯಯಕ್ತಿಕ ಮೂರು ತಲೆಮಾರಿನ ಅಂದರೆ 1930 ರ ಸಾಗುವಳಿ ದಾಖಲೆ ಕೇಳುವ ವಿಧಾನವನ್ನು ಅವರು ಗಮನಕ್ಕೆ ತಂದರು.
`ಕಾನೂನು ಭಾಹಿರವಾಗಿ ಅರಣ್ಯವಾಸಿಗಳ ಹಿತಾಶಕ್ತಿ ಮತ್ತು ಕಾನೂನಿಗೆ ವ್ಯತಿರಿಕ್ತವಾಗಿ ಪುನರ್ ಪರಿಶೀಲನಾ ಅರ್ಜಿಯ ಪ್ರಕ್ರಿಯೆ ಜರುಗುತ್ತಿರುವದಕ್ಕೆ ಸರ್ಕಾರ ಹೆಚ್ಚಿನ ಗಮನಕ್ಕೆ ಹರಿಸಬೇಕು’ ಎಂದು ಎಚ್.ಎನ್.ನಾಗಮೋಹನದಾಸ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.