ಮುoಡಗೋಡ: ಟಿಬೇಟಿಯನ್ ಕಾಲೋನಿ ಬಳಿ ಗುರುವಾರ ಎರಡು ಬೈಕ್ ನಡುವೆ ಅಪಘಾತವಾಗಿದೆ. ಈ ಅಪಘಾತದಲ್ಲಿ ಯಲ್ಲಾಪುರದ ವ್ಯಕ್ತಿಯೊಬ್ಬರು ಸಾವನಪ್ಪಿದ್ದು, ಗಾಯಗೊಂಡ ಮತ್ತೊಬ್ಬರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಯಲ್ಲಾಪುರದ ಕಿರವತ್ತಿಯ ಗುರುನಾಥ ಪವಾರ್ (35) ಅವರು ಬೈಕಿನಲ್ಲಿ ಹೋಗುತ್ತಿದ್ದರು. ಮುಂಡಗೋಡ ಸುಭಾಶನಗರದ ಆಸೀಪ್ ಅವರು ಓಡಿಸುತ್ತಿದ್ದ ಬೈಕು ಗುರುನಾಥ ಅವರ ಬೈಕಿಗೆ ಡಿಕ್ಕಿಯಾಯಿತು.
ಈ ಡಿಕ್ಕಿಯ ರಭಸಕ್ಕೆ ಎರಡು ಬೈಕಿನವರು ನೆಲಕ್ಕೆ ಬಿದ್ದು ಗಾಯಗೊಂಡರು. ಆ ಪೈಕಿ ಗಂಭೀರ ಗಾಯಗೊಂಡ ಗುರುನಾಥ ಪವಾರ್ ಸಾವನಪ್ಪಿದರು. ಗಾಯಗೊಂಡು ನರಳುತ್ತಿದ್ದ ಆಸೀಫ್’ರನ್ನು ನೋಡಿದ ಜನ ಆಸ್ಪತ್ರೆಗೆ ದಾಖಲಿಸಿದರು.
ಆಸಿಫ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ. ಅಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.