ಭಟ್ಕಳ: ಆಸರಿಕೆರೆಯ ಪಶುಪತಿ ದೇವಾಲಯದ ಬಳಿ ಅಲೆದಾಡುತ್ತಿದ್ದ ಮಹ್ಮದ್ ರಯ್ಯಾನ್ ಎಂಬಾತನ ಬಾಯಿಂದ ಗಬ್ಬು ವಾಸನೆ ಬಂದಿದ್ದು, ಆತನನ್ನು ಪಿಎಎಸ್‌ಐ ನವೀನ ನಾಯ್ಕ ವೈದ್ಯಕೀಯ ಪರೀಕ್ಷೆಗೆ ರವಾನಿಸಿದ್ದಾರೆ. ಆತ ಗಾಂಜಾ ಸೇವಿಸಿರುವುದು ವೈದ್ಯಕೀಯ ವರದಿಯಲ್ಲಿ ದೃಢವಾಗಿದೆ.
ಭಟ್ಕಳ ಬಿಲಾಲಖಂಡ್ ಗುಳ್ಮೆ ಸೇತುವೆ ಬಳಿಯ ಮಹ್ಮದ್ ರಯ್ಯಾನ್ ಜನವರಿ 8ರಂದು ಆಸರಿಕೆರೆಯ ಪಶುಪತಿ ದೇವಾಲಯದ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ. ಆತ ಮಾದಕ ವಸ್ತು ಸೇವನೆ ಮಾಡಿರಬಹುದು ಎಂಬ ಅನುಮಾನ ಪೊಲೀಸರನ್ನು ಕಾಡಿತು. ಆತನನ್ನು ಪಿಎಸ್‌ಐ ನವೀನ ನಾಯ್ಕ ಮಾತನಾಡಿಸಿದರು. ಆಗ, ಆತನ ಬಾಯಿಂದ ಘಾಟು ವಾಸನೆ ಬಂದಿತು.
ಕೂಡಲೇ ಮಹ್ಮದ್ ರಯ್ಯಾನ್’ನನ್ನು ಪೊಲೀಸರು ವಶಕ್ಕೆ ಪಡೆದರು. ಆತನನ್ನು ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಪರೀಕ್ಷೆಗೆ ಒಳಪಡಿಸಿದ ವೈದ್ಯರು ಮಹ್ಮದ್ ರಯ್ಯಾನ್ ಗಾಂಜಾ ಸೇವಿಸಿರುವ ಬಗ್ಗೆ ದೃಢಪಡಿಸಿದರು. ಈ ಹಿನ್ನಲೆ ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು.



