ಕಾರವಾರ: ಬಿಣಗಾದ ಗ್ರಾಸೀಂ ಇಂಡಸ್ಟಿಯಲ್ಲಿ ರಾಸಾಯನಿಕ ಅನಿಲ ಸೋರಿಕೆಯಾಗಿದ್ದು, 12 ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಶನಿವಾರ ಮಧ್ಯಾಹ್ನದ ಅವಧಿಯಲ್ಲಿ ಈ ಅವಘಡ ನಡೆದಿದೆ.
ಬಿಣಗಾದಲ್ಲಿ ರಾಸಾಯನಿಕ ಸೋರಿಕೆ ಇದೇ ಮೊದಲಲ್ಲ. ಐದಾರು ವರ್ಷದ ಅವಧಿಯಲ್ಲಿ 10ಕ್ಕೂ ಅಧಿಕ ಬಾರಿ ರಾಸಾಯನಿಕ ಸೋರಿಕೆಯಿಂದ ಸ್ಥಳೀಯರು ಸಮಸ್ಯೆ ಅನುಭವಿಸಿದ್ದಾರೆ. ಕೆಲ ದಿನಗಳ ಹಿಂದೆ ರಾಸಾಯನಿಕ ಸೋರಿಕೆಯಿಂದ ಕಾರ್ಮಿಕರೊಬ್ಬರು ಸಾವನಪ್ಪಿದ್ದರು. ಅದಾಗಿಯೂ ಕಂಪನಿ ಕಾರ್ಮಿಕರ ವಿಷಯದಲ್ಲಿ ಮುನ್ನಚ್ಚರಿಕೆವಹಿಸಿಲ್ಲ ಎಂಬುದು ಶನಿವಾರದ ವಿದ್ಯಮಾನದಿಂದ ಸಾಭೀತಾಗಿದೆ.
ಶನಿವಾರ ಗ್ರಾಸಿಂ ಘಟಕದಲ್ಲಿ ಕಾರ್ಯನಿರ್ವಹಿಸುವ ವೇಳೆ ರಾಸಾಯನಿಕ ಸೋರಿಕೆಯಿಂದ ಕೆಲವರಿಗೆ ಕಣ್ಣು ಉರಿ ಶುರುವಾಯಿತು. ಇನ್ನು ಕೆಲಸವರು ಉಸಿರಾಟದ ಸಮಸ್ಯೆ ಅನುಭವಿಸಿದರು. ಅವರನ್ನು ಕಂಪನಿ ಇತರೆ ಸಿಬ್ಬಂದಿ ರಕ್ಷಿಸಿ ಘಟಕದಿಂದ ಹೊರ ತಂದರು. ಆ ಕಾರ್ಮಿಕರನ್ನು ಕಿಮ್ಸ್’ಗೆ ದಾಖಲಿಸಲಾಗಿದೆ.
ನೀಲಕಂಠ (22), ಜಹಾನೂರ (20), ಕಮಲೇಶ ವರ್ಮಾ (22), ನಂದಕಿಶೋರ (21), ದೀಪು (28), ಅಜೀಜ್ (23), ಕಲ್ಲು (37), ಸುಜನ್ (26), ನಜೀದುಲ್ಲಾ (24), ಬೇಜನಕುಮಾರ್ (27), ಕಿಶನ್ ಕುಮಾರ್ (28), ಮೋಹಿತ್ ವರ್ಮಾ (21) ಎಂಬಾತರು ಅಸ್ವಸ್ಥರಾದವರು. ಕೃತಕ ಆಮ್ಲಜನಕ ಪೂರೈಸಿದ್ದರಿಂದ ಸದ್ಯ ಅವರು ಉಸಿರಾಡುತ್ತಿದ್ದಾರೆ.