ಭಟ್ಕಳ: ಹಿಂದೂ ದೇವಾಲಯ ಹಾಗೂ ಭಾರತೀಯ ಪೊಲೀಸ್ ವ್ಯವಸ್ಥೆ ಬಗ್ಗೆ ಅಣಕಿಸುವುದನ್ನು ಕಾಯಕವನ್ನಾಗಿಸಿಕೊಂಡ ರಷ್ಯಾ ಪ್ರಜೆಯೊಬ್ಬ ಮುರುಡೇಶ್ವರ ತಲುಪಿದ್ದು, ಇಲ್ಲಿಯೂ ತನ್ನ ಹುಚ್ಚಾಟ ಮುಂದುವರೆಸಿದ್ದಾನೆ.
ರಷ್ಯಾದ ವ್ಲಾಗರ್ ಶೆರ್ಬಕೋವ್ ಮ್ಯಾಕ್ಸಿಮ್ಎಂಬಾತ ತನ್ನ makx0000collapse_ ಎಂಬ ಇನ್ ಸ್ಟಾ ಖಾತೆಯಿಂದ ಈ ವಿಡಿಯೋ ಹಂಚಿಕೊoಡಿದ್ದಾನೆ. ಮುರುಡೇಶ್ವರ ದೇವಾಲಯದ ಗೋಪುರ ಏರಿದ ಆತ ಇಲ್ಲಿನ ಸುರಕ್ಷತೆ ಹಾಗೂ ಭದ್ರತೆಯ ಬಗ್ಗೆ ಅಣಕಿಸಿದ್ದಾನೆ.
ಮುರುಡೇಶ್ವರದ ಜೊತೆ ಭಾರತದ ಇನ್ನಿತರ ದೇವಾಲಯಗಳನ್ನು ನಿಂದಿಸಿ ಆತ ಹಲವು ವಿಡಿಯೋ ಪೋಸ್ಟ್ ಮಾಡಿದ್ದಾನೆ. ಆತ ಮುರುಡೇಶ್ವರ ಗೋಪುರ ಏರಿದ ಹಾಗೂ ಅಲ್ಲಿ ಕುಣಿದಾಡಿದ ಪ್ರತ್ಯೇಕ ವಿಡಿಯೋಗಳಿವೆ. ಆ ವಿಡಿಯೋ ಕಮೆಂಟ್’ನಲ್ಲಿ ಆತ ಇಲ್ಲಿನ ಪೊಲೀಸ್ ವ್ಯವಸ್ಥೆಯ ಬಗ್ಗೆಯೂ ಆತ ಪ್ರಶ್ನಿಸಿದ್ದಾನೆ. `ತಾನು ಗೋಪುರ ಏರಿದರೂ ಯಾರು ತಡೆಯುವವರಿಲ್ಲ’ ಎಂಬ ನಿಟ್ಟಿನಲ್ಲಿ ಆತ ಕಮೆಂಟ್ ಮಾಡಿದ್ದಾನೆ.
ಇದೇ ಮೊದಲಲ್ಲ.. ಈತನ ಹುಚ್ಚಾಟಕ್ಕೆ ಕೊನೆ ಇಲ್ಲ!
ಮುಂಬೈದಲ್ಲಿ ಸಹ ಈತ ಇಂಥ ಹುಚ್ಚಾಟ ನಡೆಸಿದ್ದ. ಆಗ ಪೊಲೀಸರು ಆತನನ್ನು ಬಂಧಿಸಿದ್ದರು. ಅದಾಗಿಯೂ ಆತ ತನ್ನ ನಡೆಯನ್ನು ಬದಲಿಸಿಕೊಂಡಿಲ್ಲ. ಇನ್ನೂ ಆತ ಗೋಪುರ ಏರಿದರೂ ಅದು ಅಲ್ಲಿನ ಭದ್ರತಾ ಸಿಬ್ಬಂದಿಗೆ ಹೇಗೆ ಗೊತ್ತಾಗಲಿಲ್ಲ? ಎಂಬ ಪ್ರಶ್ನೆಯೂ ಕಾಡುತ್ತಿದೆ.