ಕಾರವಾರ: ನಗೆ ಶಾಲೆ ಮಕ್ಕಳು ಮಡಿಕೇರಿ-ಮೈಸೂರು ಪ್ರವಾಸ ಮುಗಿಸಿ ಬಂದಿದ್ದಾರೆ. ಮುರುಡೇಶ್ವರ, ಕೊಲ್ಲೂರು, ಉಡುಪಿ, ಮಂಗಳೂರು, ಮಡಿಕೇರಿ, ಕೊಡಗು, ಚಿಕ್ಕಮಗಳೂರು, ಮೈಸೂರು, ಶ್ರವಣ ಬೆಳಗುಳ, ಶಿವಮೊಗ್ಗ, ತಾವರೆಕೊಪ್ಪ, ಭದ್ರಾವತಿ, ಜೋಗ ಜಲಪಾತ ಸುತ್ತುವರೆದ ಮಕ್ಕಳು ಮರಳಿ ಗೂಡು ಸೇರಿದರು.
ಮುರುಡೇಶ್ವರ ದೇವಾಲಯ, ಭಟ್ಕಳದ ಮಾರುಕಟ್ಟೆ ನೋಡಿದ ಮಕ್ಕಳು ಮುಂದೆ ಕೊಲ್ಲೂರು ದೇವಸ್ಥಾನಕ್ಕೆ ತೆರಳಿದರು. ಉಡುಪಿ ಕೃಷ್ಣಮಠದ ದರ್ಶನ ಮುಗಿಸಿ ಮಡಿಕೇರಿ ಕಾಫಿ ನಾಡಿನ ಸೊಬಗು ಆಹ್ವಾದಿಸಿದರು. ಕಾಫಿ ತಯಾರಿಕೆ ಹಾಗೂ ಅಲ್ಲಿನ ಪರಿಸರದ ಬಗ್ಗೆ ಶಿಕ್ಷಕರು ಮಾಹಿತಿ ನೀಡಿದರು. ಮೈಸೂರಿನ ಅರಮನೆ, ಚಾಮುಂಡಿ ಬೆಟ್ಟ ನೋಡಿ ಕುದುರೆ ಸವಾರಿ ಮಾಡಿದರು ಶ್ರವಣಬೆಳಗೋಳ, ಶಿವಮೊಗ್ಗ ಸಮೀಪದಲ್ಲಿ ತಾವರೆಕೊಪ್ಪ, ಹುಲಿ ಮತ್ತು ಸಿಂಹಧಾಮದಲ್ಲಿನ ಕಾಡು ಪ್ರಾಣಿಗಳನ್ನು ನೋಡಿದರು.
ಅದಾದ ನಂತರ ಜೋಗ ಪ್ರವೇಶಿಸಿ, ಅಲ್ಲಿನ ಜಲಪಾತ ವೀಕ್ಷಿಸಿದರು. ಮಕ್ಕಳ ಜೊತೆ ಪಾಲಕರು ಸಹ ಪ್ರವಾಸದಲ್ಲಿ ಭಾಗವಹಿಸಿದ್ದರು. ಶಾಲಾ ಮುಖ್ಯಾಧ್ಯಾಪಕ ಅಖ್ತರ ಸೈಯದ್, ಸಹಶಿಕ್ಷಕಿ ರೂಪಾ ನಾಯ್ಕ, ಅತಿಥಿ ಶಿಕ್ಷಕಿ ಪ್ರಿಯಾ ಲಾಂಜೇಕರ ಮಕ್ಕಳನ್ನು ವಿವಿಧ ತಾಣಗಳಿಗೆ ಕರೆದೊಯ್ದು ಮಾಹಿತಿ ನೀಡಿದರು.



