ಹಳಿಯಾಳ: ಕಳೆನಾಶಕ ಸೇವಿಸಿದ್ದ ಪಾಂಡುರoಗ ಮಿರಾಶಿ ಅವರಿಗೆ ನಿರಂತರ ವೈದ್ಯಕೀಯ ಆರಯಕೆ ನಡೆದಿದ್ದು, 20 ದಿನದ ನಂತರ ಸಾವನಪ್ಪಿದ್ದಾರೆ.
ಹಳಿಯಾಳ ಸಂಕನಕೊಪ್ಪದಲ್ಲಿ ಎಲೆಕ್ಟಿಶಿಯನ್ ಆಗಿದ್ದ ಪಾಂಡುರAಗ ಮಿರಾಶಿ (20) ಡಿಸೆಂಬರ್ 19ರಂದು ಕಳೆನಾಶಕ ಸೇವಿಸಿದ್ದರು. ಅವರನ್ನು ಮೊದಲು ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾದ ನಂತರ ಧಾರವಾಡ ಸಿವಿಲ್ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಮುಂದೆ ಕಿಮ್ಸ್’ಗೆ ದಾಖಲಿಸಲಾಯಿತು.
ಡಿ 29ರಂದು ಆರೋಗ್ಯದಲ್ಲಿ ಚೇತರಿಕೆಯಾದ ಕಾರಣ ಕುಟುಂಬದವರು ಆಸ್ಪತ್ರೆಯಿಂದ ಅವರನ್ನು ಮನೆಗೆ ತಂದರು. ಆದರೆ, ಮರುದಿನವೇ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಯಿತು. ಹೀಗಾಗಿ ಮತ್ತೆ ಹಳಿಯಾಳ ಆಸ್ಪತ್ರೆ, ಧಾರವಾಡ ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು. ಜನವರಿ 9ರವರೆಗೆ ಧಾರವಾಡದ ಸಿವಿಲ್ ಆಸ್ಪತ್ರೆಯಲ್ಲಿ ಉಪಚಾರ ನಡೆಸಿ ಕಿಮ್ಸ್ ಕರೆದೊಯ್ಯುವಾಗ ಪಾಂಡುರoಗ ಮಿರಾಶಿ ಸಾವನಪ್ಪಿದರು.