ಕುಮಟಾ: ಮುಂಡಗೋಡದಲ್ಲಿ ಅಂಗನವಾಡಿಗೆ ತೆರಳಿದ ಬಾಲಕಿ ಸಾವನಪ್ಪಿದನ್ನು ನೆನಪಿಸಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಜನತಾ ಪ್ಲಾಟ್ ಮಾಸೂರು ಕ್ರಾಸ್ ಅಂಗನವಾಡಿ ಸುತ್ತ ಶ್ರಮದಾನ ನಡೆಸಿದರು. ಗಿಡಗಂಟಿಗಳು ಬೆಳೆದ ಕಡೆ ಹಾವು ಬರುವುದು ಸಾಮಾನ್ಯವಾಗಿದ್ದು, ಮಕ್ಕಳ ಸುರಕ್ಷತೆ ಬಗ್ಗೆ ಗಮನಹರಿಸುವಂತೆ ಅವರು ಕೋರಿದರು.
ಜನತಾ ಪ್ಲಾಟ್ ಮಾಸೂರು ಕ್ರಾಸ್ ಬಳಿ ವ್ಯಾಪಕ ಪ್ರಮಾಣದಲ್ಲಿ ಗಿಡ-ಗಂಟಿ ಬೆಳೆದಿದ್ದು ಅದನ್ನು ಸ್ವಚ್ಛ ಮಾಡಿದರು. ಅಂಗನವಾಡಿ ಹಾಗೂ ಕಿರಿಯ ಪ್ರಾಥಮಿಕ ಶಾಲೆಯ ಎದುರು ಮುಳ್ಳು ಗಿಡಗಳು ಬೆಳೆದಿದ್ದವು. ಮಕ್ಕಳ ಓಡಾಟ ಹಾಗೂ ವಿದ್ಯಾಬ್ಯಾಸಕ್ಕೆ ಇಲ್ಲಿ ಶುದ್ಧ ವಾತಾವರಣ ಅಗತ್ಯ ಎಂದು ಎಲ್ಲರೂ ಸೇರಿ ಶ್ರಮದಾನ ಮಾಡಿದರು.
ಈ ವೇಳೆ ಆಗ್ನೇಲ್ ರೋಡ್ರಿಗಸ್ ಮಾತನಾಡಿ `ನಮ್ಮ -ನಮ್ಮ ಮನೆಯ ಹತ್ತಿರ ಇರುವ ಅಂಗನವಾಡಿ ಹಾಗೂ ಶಾಲೆಗಳ ಸುತ್ತ ನಾವೇ ಸ್ವಚ್ಛ ಮಾಡುವ ಕಾರ್ಯ ನಡೆಸಬೇಕು. ಆಗ ಅನಾಹುತ ತಡೆ ಸಾಧ್ಯ’ ಎಂದರು. ಕಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕಿ ಮಾಲತಿ ನಾಯ್ಕ ಹಾಗೂ ಅಂಗನವಾಡಿ ಯ ಶಿಕ್ಷಕಿ ಸುರೇಖಾ ನಾಯ್ಕ ಅವರು ಶ್ರಮದಾನ ನಡೆಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಪ್ರಮುಖರಾದ ಸುಧಾಕರ ನಾಯ್ಕ, ತ್ಯಾಗರಾಜ, ಏಕನಾಥ ನಾಯ್ಕ ಇದ್ದರು.
ಶ್ರಮದಾನದ ನಂತರ ಆಗ್ನೇಲ್ ರೋಡಿಗ್ರಿಸ್ ಅವರು ಮಾತನಾಡಿದ ವಿಡಿಯೋ ಇಲ್ಲಿ ನೋಡಿ..