ಶಿರಸಿ: ಬಿಳಿ ಹುಲ್ಲು ತುಂಬಿಕೊoಡು ಸಂಚರಿಸುತ್ತಿದ್ದ ಲಾರಿಗೆ ಬೆಂಕಿ ತಗುಲಿದೆ. ಲಾರಿ ಮೇಲಿದ್ದ ಹುಲ್ಲು ಹೊತ್ತಿ ಉರಿದಿದ್ದು, ಲಾರಿಗೆ ಅಗ್ನಿಸ್ಪರ್ಶವಾಗುವ ಮುನ್ನ ಬೆಂಕಿ ಆರಿಸುವ ಪ್ರಯತ್ನ ನಡೆಯಿತು.
ಜೂ ಸರ್ಕಲ್ ಬಳಿ ಈ ಅಗ್ನಿ ಅವಘಡ ನಡೆದಿದೆ. ಪೋಲಿಸ್ ವಸತಿ ಗೃಹದ ಎದುರು ಲಾರಿ ಚಲಿಸುತ್ತಿದ್ದಾಗ ಬೆಂಕಿ ಬಿದ್ದಿದೆ. ಲಾರಿಯ ಮೇಲಿನ ಹುಲ್ಲಿನಿಂದ ಹೊಗೆಯಾಡುತ್ತಿರುವುದನ್ನು ನೋಡಿದ ಜನ ಲಾರಿ ಚಾಲಕನಿಗೆ ಮಾಹಿತಿ ನೀಡಿದರು. ನಂತರ ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ಮುಟ್ಟಿಸಿದರು.
ಅಗ್ನಿಶಾಮಕ ಸಿಬ್ಬಂದಿ ಆಗಮಿಸುವಷ್ಟರಲ್ಲಿ ಬೆಂಕಿಯ ಜ್ವಾಲೆ ವ್ಯಾಪಕ ಪ್ರಮಾಣದಲ್ಲಿ ಬೆಳೆದಿದ್ದು, ಅದಾಗಿಯೂ ಸಿಬ್ಬಂದಿ ಬೆಂಕಿ ಆರಿಸಿದರು. ನೀರು-ಬೆಂಕಿಯ ಮಿಶ್ರಣದಿಂದ ದಟ್ಟವಾದ ಹೊಗೆ ಈ ಭಾಗದಲ್ಲಿ ಕಾಣಿಸಿಕೊಂಡಿತು. ಅಗ್ನಿ ಅವಘಡಕ್ಕೆ ನಿಖರ ಕಾರಣ ಗೊತ್ತಾಗಿಲ್ಲ.