ಶಿರಸಿ: ಮಾರಿಕಾಂಬಾ ನಗರದಲ್ಲಿ ಅಲೆದಾಡುತ್ತಿದ್ದ ಸೋಹನ ಭಂಡಾರಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಆತ ಗಾಂಜಾ ಸೇವಿಸಿರುವುದು ಖಚಿತವಾಗಿದೆ.
ಗುರುವಾರ ಬೆಳಗ್ಗೆ ಸೋಹನ ಭಂಡಾರಿ ಮಾರಿಕಾಂಬಾ ನಗರದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ. ಆತನನ್ನು ನೋಡಿದ ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಆಗ, ಪೊಲೀಸರ ಬಳಿ ಮಾತನಾಡಲು ಆತ ತಡವರಿಸಿದ. ನಶೆಯಲ್ಲಿರುವ ಅನುಮಾನ ಹಿನ್ನಲೆ ಸರ್ಕಾರಿ ಆಸ್ಪತ್ರೆಗೆ ಆತನನ್ನು ಕರೆದೊಯ್ಯಲಾಯಿತು. ಅಲ್ಲಿ ತಪಾಸಣೆ ನಡೆಸಿದ ವೈದ್ಯರು ಸೋಹನ ಭಂಡಾರಿ ಗಾಂಜಾ ಸೇವಿಸಿರುವ ಬಗ್ಗೆ ವರದಿ ನೀಡಿದರು.
ಈ ಹಿನ್ನಲೆ ಪೊಲೀಸರು ಸೋಹನ ಭಂಡಾರಿಯನ್ನು ವಶಕ್ಕೆ ಪಡೆದರು. ಸೊಹನ ಭಂಡಾರಿ ಶಿರಸಿ ನಗರದ ಹಾಲೊಂಡ ಬಡಾವಣೆಯ ನಿವಾಸಿ. ಆತನಿಗೆ ಗಾಂಜಾ ಪೂರೈಸಿದವರು ಯಾರು? ಎಂಬುದರ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.