ಕಾರವಾರ: ಊಟ ಮಾಡಿ ಸುಮ್ಮನೆ ಕುಳಿತಿದ್ದ ರಾಜೇಂದ್ರ ರಾಮನಾಥಕರ (60) ದಿಢೀರ್ ಆಗಿ ಸಾವನಪ್ಪಿದ್ದಾರೆ.
ರಾಜೇಂದ್ರ ರಾಮನಾಥಕರ್ ಅವರು ಕೈಗಾ ಅಣು ವಿದ್ಯುತ್ ಘಟಕದಲ್ಲಿ ನೌಕರರಾಗಿದ್ದರು. ನಿವೃತ್ತಿ ನಂತರ ಕಳಸವಾಡದಲ್ಲಿ ವಾಸವಿದ್ದರು. ಜನವರಿ 15ರ ರಾತ್ರಿ ಕಳಸವಾಡದಲ್ಲಿರುವ ಮನೆಯಲ್ಲಿ ಊಟ ಮಾಡಿ ಕುಳಿತಿದ್ದರು.
ಈ ವೇಳೆ ದಿಢೀರ್ ಆಗಿ ಕುಸಿದು ಬಿದ್ದ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ಉಪಚಾರ ಮಾಡಿದರೂ ಅವರು ಬದುಕಲಿಲ್ಲ. ರಾಜೇಂದ್ರ ಅವರ ಸಾವಿನ ಬಗ್ಗೆ ಯಲ್ಲಾಪುರದಲ್ಲಿ ಶಿಕ್ಷಕರಾಗಿರುವ ಅವರ ಸಹೋದರ ನಂದಕಿಶೋರ ರಾಮನಾಥಕರ ಅವರು ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.