ಶಿರಸಿ: ಸಮಯಕ್ಕೆ ಸರಿಯಾಗಿ ಊಟ ಮಾಡದೇ ಸರಾಯಿ ಸೇವಿಸಿ ಬದುಕುತ್ತಿದ್ದ ಫಕೀರಪ್ಪ ಬೋವಿವಡ್ಡರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ನೇಣು ಹಾಕಿಕೊಂಡು ನರಳಾಡುತ್ತಿದ್ದಾಗ ಅದನ್ನು ತಪ್ಪಿಸಿ ಆಸ್ಪತ್ರೆಗೆ ಕರೆದೊಯ್ದರೂ ಅವರು ಬದುಕಲಿಲ್ಲ.
ಶಿರಸಿ ಗಣೇಶ ನಗರದ ಮಾರುತಿ ದೇವಸ್ಥಾನದ ಬಳಿ ಫಕೀರಪ್ಪ ಬೋವಿವಡ್ಡರ್ ವಾಸವಾಗಿದ್ದರು. ಅವರು ಗೌಂಡಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಆದರೆ, ನಿತ್ಯ ಅವರು ಸಮಯಕ್ಕೆ ಸರಿಯಾಗಿ ಊಟ ಸೇವಿಸುತ್ತಿರಲಿಲ್ಲ. ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊAಡಿದ್ದರು.
ಇದರ ಪರಿಣಾಮ ಅವರಿಗೆ ಹೊಟ್ಟೆ ನೋವು ಬಂದಿದ್ದು, ಅದನ್ನು ಸಹಿಸದೇ ಆತ್ಮಹತ್ಯೆಯ ನಿರ್ಧಾರ ಮಾಡಿದ್ದರು. ಜನವರಿ 16ರಂದು ಮನೆಯಲ್ಲಿದ್ದ ಅವರು ಫ್ಯಾನಿಗೆ ನೇಣು ಹಾಕಿಕೊಂಡು ಸಾಯುವ ಪ್ರಯತ್ನ ನಡೆಸಿದರು. ಇದನ್ನು ನೋಡಿದ ಕುಟುಂಬದವರು ತಕ್ಷಣ ಅವರನ್ನು ಕೆಳಗಿಳಿಸಿ ಟಿಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿದರು. ನರಳಾಡುತ್ತಿದ್ದ ಅವರು ಮಧ್ಯಾಹ್ನ 1 ಗಂಟೆ ಆಸುಪಾಸಿನಲ್ಲಿ ಕೊನೆ ಉಸಿರೆಳೆದರು.
ಈ ಬಗ್ಗೆ ಗಣೇಶ ಬೋವಿವಡ್ಡರ್ ಪೊಲೀಸರಿಗೆ ವರದಿ ಒಪ್ಪಿಸಿ, ಪ್ರಕರಣ ದಾಖಲಿಸಿದ್ದಾರೆ.