ಶಿರಸಿ: ಗಾಂಜಾ ನಶೆಯಲ್ಲಿ ಸಿಕ್ಕಿ ಬಿದ್ದು ಬಂಧನಕ್ಕೆ ಒಳಗಾಗಿರುವ ಸೋಹನ ಭಂಡಾರಿ ವಿರುದ್ಧ ವಾಹನ ಅಪಘಾತದ ದೂರು ದಾಖಲಾಗಿದೆ.
ಗುರುವಾರ ಬೆಳಗ್ಗೆ ಮಾರಿಕಾಂಬಾ ನಗರದ 8ನೇ ಅಡ್ಡರಸ್ತೆಯಲ್ಲಿ ಅಡ್ಡಾದಿಡ್ಡಿ ಅಲೆದಾಡುತ್ತಿದ್ದ ಸೋಹನ್ ಭಂಡಾರಿಯನ್ನು ಪೊಲೀಸರು ವಿಚಾರಿಸಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಆತ ಗಾಂಜಾ ಸೇವಿಸಿರುವುದು ದೃಢವಾದ ಹಿನ್ನಲೆ ಆತನನ್ನು ವಶಕ್ಕೆ ಪಡೆದಿದ್ದರು. ಇದೀಗ ಬುಧವಾರ ಆತ ಅಡ್ಡಾದಿಡ್ಡಿ ವಾಹನ ಓಡಿಸಿ ವ್ಯಕ್ತಿಯೊಬ್ಬರಿಗೆ ಗುದ್ದಿರುವುದು ಗಮನಕ್ಕೆ ಬಂದಿದೆ.
ಗಣೇಶನಗರ ಮಾರುತಿ ದೇವಸ್ಥಾನ ಬಳಿ ವಾಸಿಸುವ ಎಲೆಕ್ಟಿಕಲ್ ಕೆಲಸ ಮಾಡುವ ನಾಗೇಶ ನಾಯ್ಕ ಅವರು ಸೋಹನ್ ಭಂಡಾರಿ ವಿರುದ್ಧ ದೂರು ನೀಡಿದ್ದಾರೆ. ಶಿರಸಿ ಉಣ್ಣಿಮಠಗಲ್ಲಿಯಲ್ಲಿ ರಾಘವೇಂದ್ರ ಗೌಡ ಎಂಬಾತರು ಬೈಕಿನಲ್ಲಿ ಹೋಗುತ್ತಿದ್ದಾಗ ಜೋರಾಗಿ ಬೈಕ್ ಓಡಿಸಿಕೊಂಡು ಬಂದ ಸೋಹನ್ ಭಂಡಾರಿ ಅವರಿಗೆ ತಮ್ಮ ಬೈಕ್ ಗುದ್ದಿದ ಬಗ್ಗೆ ಪ್ರಕರಣ ದಾಖಲಾಗಿದೆ.
ಚೈನಿಸ್ ಕಾರ್ನರ್ ಕಡೆಯಿಂದ ಬಾರಕೂರು ಚೌಕದ ಕಡೆ ತೆರಳುತ್ತಿದ್ದ ವಾಹನಗಳ ನಡುವೆ ಡಿಕ್ಕಿಯಾಗಿದ್ದರಿಂದ ರಾಘವೇಂದ್ರ ಗೌಡ ಅವರಿಗೆ ಗಾಯವಾಗಿದೆ. ಈ ಅಪಘಾತದಲ್ಲಿ ಸೋಹನ ಭಂಡಾರಿ ಅವರಿಗೂ ಅಲ್ಪ ಪ್ರಮಾಣದಲ್ಲಿ ಪೆಟ್ಟಾದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.