ಬರೆಯವರ ಬಗ್ಗೆ ಸದಾ ಹಗರುವಾಗಿ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ತನೆಯನ್ನು ಯಲ್ಲಾಪುರದ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಖಂಡಿಸಿದ್ದಾರೆ. `ಅವರು ಸಿದ್ದರಾಮಯ್ಯ ಅಲ್ಲ, ಸೊಕ್ಕುರಾಮಯ್ಯ’ ಎಂದು ರಾಮು ನಾಯ್ಕ ಹೇಳಿದ್ದಾರೆ.
`ಪ್ರತಿಯೊಬ್ಬರಿಗೂ ತಮ್ಮದೇ ಆದ ಗೌರವವಿರುತ್ತದೆ. ಅದರಲ್ಲಿಯೂ ಸರ್ಕಾರಿ ಅಧಿಕಾರಿಗಳು ಸಾಕಷ್ಟು ಸಾಧನೆ ಮಾಡಿ ಆ ಹುದ್ದೆಗೆ ಬಂದಿರುತ್ತಾರೆ. ಹೀಗಿರುವಾಗ ಅಂಥವರನ್ನು ಬಹಿರಂಗವಾಗಿ ನಿಂದಿಸುವುದು ಮುಖ್ಯಮಂತ್ರಿ ಹುದ್ದೆಗೆ ಶೋಭೆಯಲ್ಲ’ ಎಂದು ರಾಮು ನಾಯ್ಕ ಹೇಳಿದ್ದಾರೆ.
`ಖಾಸಗಿ ಕಾರ್ಯಕ್ರಮವೊಂದರಲ್ಲಿ ಸರ್ಕಾರಿ ಅಧಿಕಾರಿಯೊಬ್ಬರನ್ನು ಸಂಘಟಕರು ವೇದಿಕೆ ಮೇಲೆ ಕೂರಿಸಿದ್ದರು. ಅದನ್ನು ಸಹಿಸದ ಸಿದ್ದರಾಮಯ್ಯ ಅಧಿಕಾರಿ ವಿರುದ್ಧ ಕಿಡಿಕಾರಿದ್ದು ಸರಿಯಲ್ಲ’ ಎಂದು ರಾಮು ನಾಯ್ಕ ಹೇಳಿದ್ದಾರೆ. `ಸಿದ್ದರಾಮಯ್ಯ ಅವರ ವರ್ತನೆ, ಅಹಂಕಾರ ಹೆಚ್ಚಾಗಿದೆ. ಸ್ವಾಮೀಜಿ ಪಕ್ಕದಲ್ಲಿ ಕುಳಿತು ಅಧಿಕಾರಿಯನ್ನು ನಿಂದಿಸಿರುವುದು ಖಂಡನೀಯ’ ಎಂದಿದ್ದಾರೆ.
`ಸ್ವಾಮೀಜಿಯ ಪಕ್ಕದಲ್ಲಿ ಕುಳಿತಿದ್ದ ಮುಸ್ಲಿಂ ಮಂತ್ರಿಯನ್ನು ಸಿದ್ದರಾಮಯ್ಯ ಅದ್ಧೂರಿಯಾಗಿ ಸ್ವಾಗತಿಸುತ್ತಾರೆ. ಆದರೆ, ದಲಿತ ಅಧಿಕಾರಿಯನ್ನು ಅದೇ ಸಭೆಯಲ್ಲಿ ನಿಂದಿಸುತ್ತಾರೆ. ಇದು ಸಿದ್ದರಾಮಯ್ಯ ಅವರ ಅಧಿಕಾರದ ಧಿಮಾಕನ್ನು ಕಾಣಿಸುತ್ತದೆ’ ಎಂದವರು ಅಭಿಪ್ರಾಯಪಟ್ಟಿದ್ದಾರೆ.