ಅಂಕೋಲಾದ ಶ್ರೀರಾಮ ಸ್ಟಡಿ ಸರ್ಕಲ್’ನಲ್ಲಿ ತರಬೇತಿ ಪಡೆದ ಇಬ್ಬರು ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ.
ಹೊನ್ನಾವರದ ಸುಭಾಷ ಗೌಡ ಅವರು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (ಸಿಆರ್‌ಪಿಎಫ್) ಆಯ್ಕೆಯಾಗಿದ್ದಾರೆ. ಅಂಕೋಲಾದ ಆದರ್ಶ ಆಗೇರ್ ಅವರು ಕೆಡಿಸಿಸಿ ಬ್ಯಾಂಕ್’ಗೆ ಆಯ್ಕೆಯಾಗಿದ್ದಾರೆ. ಸಿಆರ್‌ಪಿಎಫ್ ನಡೆಸಿದ ಪರೀಕ್ಷೆಯಲ್ಲಿ ಸುಭಾಷ ಗೌಡ ಅವರು 12ನೇ ಸ್ಥಾನ ಪಡೆದಿದ್ದಾರೆ. ಆ ಮೂಲಕ ಅವರು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಟೆಕ್ನಿಕಲ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಸುಭಾಷ ಗೌಡ ಅವರು ಶ್ರೀರಾಮ ಸ್ಟಡಿ ಸರ್ಕಲ್’ನಲ್ಲಿ ಎಂಟು ತಿಂಗಳ ಕಾಲ ತರಬೇತಿ ಪಡೆದಿದ್ದರು.
ಇನ್ನೂ ಅಂಕೋಲಾದ ಆದರ್ಶ ಆಗೇರ್ ಅವರು ಶ್ರೀರಾಮ ಸ್ಟಡಿ ಸರ್ಕಲ್’ನಲ್ಲಿ ಬ್ಯಾಂಕ್ ಪರೀಕ್ಷೆಗಳಿಗಾಗಿ ತರಬೇತಿ ಪಡೆಯುತ್ತಿದ್ದರು. ಆರು ತಿಂಗಳ ತರಬೇತಿ ಪಡೆದಿದ್ದ ಅವರು ಕೆಡಿಸಿಸಿ ಬ್ಯಾಂಕ್ ಕರೆದ ಕ್ಲರ್ಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಪರೀಕ್ಷೆ ಎದುರಿಸಿ ಉತ್ತೀರ್ಣರಾಗಿದ್ದಾರೆ. ಈ ಇಬ್ಬರು ಅಭ್ಯರ್ಥಿಗಳಿಗೆ ಶ್ರೀರಾಮ ಸ್ಟಡಿ ಸರ್ಕಲ್’ನ ಸೂರಜ ನಾಯಕ ಅವರು ಮಾರ್ಗದರ್ಶನ ಮಾಡಿದ್ದರು.