ಅಂಕೋಲಾ: ಹೆಗ್ಗಾರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಕಮಲಾಕರ ಆಗೇರ ಶಟಗೇರಿ ಪ್ರೌಢಶಾಲೆಯ ಬಾವಿಯೊಳಗೆ ನೇಣಿಗೆ ಶರಣಾಗಿದ್ದಾರೆ. ಬಾವಿಯಿಂದ ನೀರು ತರಲು ಹೋದವರು ಆತನ ಶವ ನೋಡಿ ಮೂರ್ಚೆ ಬಿದ್ದಿದ್ದಾರೆ.
ಶಟಗೇರಿಯ ಕಮಲಾಕರ ಆಗೇರ್ ಹೆಗ್ಗಾರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ವಿಪರೀತ ಸರಾಯಿ ಕುಡಿಯುವ ಚಟವನ್ನು ಆತ ಹೊಂದಿದ್ದ. ಎರಡು ತಿಂಗಳ ಹಿಂದೆ ಆತ ಮನೆಗೆ ಮರಳಿದ್ದು, ಮತ್ತೆ ಕೆಲಸಕ್ಕೆ ಹೋಗಿರಲಿಲ್ಲ.
ಜನವರಿ 16ರ ಬೆಳಗ್ಗೆ ಆತ ಶಟಗೇರಿ ಪ್ರೌಢಶಾಲೆಯ ಬಳಿ ತೆರಳಿದ್ದು, ಅಲ್ಲಿದ್ದ ಬಾವಿಯ ಗಡಗಡೆಯ ಹಗ್ಗಕ್ಕೆ ಕುಣಿಕೆ ಹಾಕಿಕೊಂಡು ಬಾವಿಯ ಒಳಗೆ ಹಾರಿದ್ದ. ಇದಾದ ನಂತರ ಶಾಲೆಗೆ ನೀರು ತರಲು ಹೋದವರು ಆತ ಶವವಾಗಿ ನೇತಾಡುತ್ತಿರುವುದನ್ನು ಗಮನಿಸಿ ಮೂರ್ಚೆ ಬಿದ್ದರು. ಇದಾದ ನಂತರ ವಿಷಯ ಅರಿತ ಊರಿನವರು ಅಲ್ಲಿ ಜಮಾಯಿಸಿದರು.
ಕಮಲಾಕರ ಆಗೇರ ಸಾವನಪ್ಪಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಪರಿಶೀಲಿಸಿದರು. ಕಮಲಾಕರ ಅವರ ತಂದೆ ಬೊಮ್ಮಯ್ಯ ಆಗೇರ್ ಈ ಬಗ್ಗೆ ಪ್ರಕರಣ ದಾಖಲಿಸಿ ಶವ ಪಡೆದರು.