ಶಿರಸಿ: ಮನೆ ಮುಂದೆ ನಿಲ್ಲಿಸಿದ್ದ ಬೈಕಿನ ಪೆಟ್ರೋಲ್ ತೆಗೆದ ದುಷ್ಕರ್ಮಿಗಳು ಆ ಬೈಕಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಮೂಲಕ ವಿಕೃತಿ ಮೆರೆದಿದ್ದಾರೆ.
ಶಿರಸಿ ಸೋಂದಾ ಔಡಳ ಬಳಿಯ ದರ್ಬೆಜಡ್ಡಿಯಲ್ಲಿ ನರಸಿಂಹ ನಾಯ್ಕ ಅವರು ಮನೆ ಹೊಂದಿದ್ದಾರೆ. ಜನವರಿ 15ರ ಸಂಜೆ ಅವರು ತಮ್ಮ ಮನೆ ಮುಂದೆ ಹಿರೋ ಕಂಪನಿಯ ಗ್ಲಾಮರ್ ಬೈಕ್ ನಿಲ್ಲಿಸಿದ್ದರು.
ಆ ದಿನ ರಾತ್ರಿ 11.15ರ ಆಸುಪಾಸಿಗೆ ಮನೆ ಅಂಗಳಕ್ಕೆ ಬಂದ ಕಿಡಿಗೇಡಿಗಳು ಪ್ಲಾಸ್ಟಿಕ್ ಬಾಟಲಿ ಮೂಲಕ ಬೈಕಿನಲ್ಲಿದ್ದ ಪೆಟ್ರೋಲ್ ತೆಗೆದಿದ್ದಾರೆ. ಅದಾದ ನಂತರ ಬೈಕನ್ನು ಅಡ್ಡ ಬೀಳಿಸಿ ಅದರ ಮೇಲೆ ಪೆಟ್ರೋಲ್ ಸುರಿದಿದ್ದಾರೆ. ಬೈಕಿಗೆ ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾರೆ.
ಕಿಡಿಗೇಡಿಗಳ ಕಾಟದಿಂದ ನರಸಿಂಹ ನಾಯ್ಕ ಅವರಿಗೆ 60 ಸಾವಿರ ರೂ ನಷ್ಟವಾಗಿದೆ. ಬೈಕಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.



