ಮನೆ ಮುಂದೆ ಸರಾಯಿ ಮಾರುತ್ತಿದ್ದ ವಂದಾನೆಯ ಕೃಷ್ಣ ನಾಯ್ಕ ಹಾಗೂ ಪಾನ್ ಬೀಡಾ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಕವಂಚೂರಿನ ಕೃಷ್ಣ ನಾಯ್ಕ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಇದರೊಂದಿಗೆ ಸರಾಯಿ ವ್ಯಾಪಾರದಲ್ಲಿ ತೊಡಗಿದ್ದ ಕಾನಗೋಡಿನ ಹಳ್ಳಿಬೈಲ್ ಆನಂದ ನಾಯ್ಕ ಸಹ ಸಿಕ್ಕಿ ಬಿದ್ದಿದ್ದಾರೆ.
ಸಿದ್ದಾಪುರದ ಪೊಲೀಸ್ ನಿರೀಕ್ಷಕ ಜೆಬಿ ಸೀತಾರಾಮ ಅವರು ಜನವರಿ 16ರಂದು ಅಂಗಡಿ ಮುಂದೆ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ ಕವಂಚೂರಿನ ಕೃಷ್ಣ ನಾಯ್ಕ ಮೇಲೆ ದಾಳಿ ನಡೆಸಿದರು. ಪೊಲೀಸ್ ಉಪನಿರೀಕ್ಷಕ ಅನೀಲ ಮಾದರ್ ಅವರು ಕವಂಚೂರಿನ ಪಾನ್ ಶಾಪ್ ಕೃಷ್ಣ ನಾಯ್ಕ ಅಂಗಡಿ ಮೇಲೆ ದಾಳಿ ಮಾಡಿದರು. ತನಿಖಾ ವಿಭಾಗದ ಪಿಎಸ್‌ಐ ಗೀತಾ ಶಿರ್ಶಿಕರ್ ಅವರು ವಂದಾನೆಯ ಕೃಷ್ಣ ನಾಯ್ಕ ಬೇಗಾರ್ ಕ್ರಾಸಿನ ಮನೆ ಮುಂದೆ ಮದ್ಯ ಮಾರಾಟ ಮಾಡುತ್ತಿದ್ದಾಗ ದಾಳಿ ಮಾಡಿದರು.
ಈ ಮುರೂ ದಾಳಿಯಲ್ಲಿಯೂ ಅಕ್ರಮ ಮದ್ಯ ಮಾರಾಟಗಾರರು ಸಿಕ್ಕಿ ಬಿದ್ದಿದ್ದು, ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. ಮದ್ಯ ಮಾರಾಟದ ವೇಳೆ ಸಿಕ್ಕಿ ಬಿದ್ದ ಖಾಲಿ ಲೋಟ, ಮದ್ಯದ ಪ್ಯಾಕೆಟ್’ನ್ನು ಸಾಕ್ಷಿಗಾಗಿ ವಶಕ್ಕೆ ಪಡೆದರು. ಅಕ್ರಮ ಮದ್ಯ ಮಾರಾಟದಿಂದ ಸಮಾಜದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆಯೂ ಅರಿವು ಮೂಡಿಸಿದರು.




