ಸಿಗರೇಟಿನ ಸೀಸದಲ್ಲಿ ಗಾಂಜಾ ತುಂಬಿ ಸೇವಿಸುತ್ತಿದ್ದ ರಾಪ್ಟಿಂಗ್ ಗೈಡ್ ಸಿಕ್ಕಿ ಬಿದ್ದಿದ್ದು, ಪೊಲೀಸರು ಆತನ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ.
ದಾಂಡೇಲಿಯ ಗಾಂಧಿನಗರದ ಆಸಿಫ್ ಅಬ್ದುಲ್ ರಜಾಕ್ ವಾಗೀನಗೇರಿ (23) ಎಂಬಾತ ಗೋಲ್ಡ್ ಪ್ಯಾಕ್ ಕಂಪನಿಯ ಸಿಗರೇಟು ಖರೀದಿಸಿದ್ದ. ಸಿಗರೇಟು ಒಳಗಿದ್ದ ತಂಬಾಕು ಹೊರತೆಗೆದು ಅದರೊಳಗೆ ಗಾಂಜಾ ತುಂಬಿ ಸೇವಿಸುತ್ತಿದ್ದ.
ಜನವರಿ 17ರ ರಾತ್ರಿ 9.45ರ ಆಸುಪಾಸಿಗೆ ಆತ ಟೌನ್‌ಶಿಫ್ ಗಾರ್ಡನ್ ಸ್ಥಳದಲ್ಲಿ ಅಲೆದಾಡುತ್ತಿದ್ದಾಗ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದರು. ಆಸಿಫ್ ಕೈಯಲ್ಲಿದ್ದ ಅರ್ದ ಸೇದಿದ ಸಿಗರೇಟನ್ನು ಪೊಲೀಸರು ವಶಕ್ಕೆ ಪಡೆದು, ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು.
ಆತ ಗಾಂಜಾ ಸೇವಿಸಿರುವುದಾಗಿ ವೈದ್ಯರು ದೃಢೀಕೃತ ವರದಿ ನೀಡಿದರು. ಈ ಹಿನ್ನಲೆ ದಾಂಡೇಲಿ ಪೊಲೀಸ್ ಉಪನಿರೀಕ್ಷಕ ಕಿರಣ ಪಾಟೀಲ ಪ್ರಕರಣ ದಾಖಲಿಸಿದರು.