ರಸ್ತೆ ಅಂಚಿನಲ್ಲಿ ನಡೆದು ಹೋಗುತ್ತಿದ್ದ 8 ವರ್ಷದ ಬಾಲಕನಿಗೆ ಖಾಸಗಿ ಬಸ್ಸು ಡಿಕ್ಕಿಯಾಗಿದೆ.
ಜನವರಿ 18ರಂದು ಸಿದ್ದಾಪುರ ತಾಲೂಕಿನ ಹಲಗೇರಿ ಸುಂಕತ್ತಿಯ ಸೀತಾರಾಮ ನಾಯ್ಕ ಅವರು ತಮ್ಮ ಪತ್ನಿ ಹಾಗೂ ಮಗನ ಜೊತೆ ತಿರುಗಾಟಕ್ಕೆ ಹೋಗಿದ್ದರು. ಬಸ್ಸಿನಿಂದ ಇಳಿದ ಅವರು ಮನೆ ಕಡೆ ನಡೆದು ಹೋಗುತ್ತಿದ್ದರು. ಆಗ, ಮಾವಿನಗುಂಡಿಯಿAದ ಸಿದ್ದಾಪುರ ಕಡೆ ಖಾಸಗಿ ಬಸ್ಸೊಂದು ವೇಗವಾಗಿ ಬಂದಿತು.
ಬಸ್ಸು ಬರುವುದನ್ನು ನೋಡಿದ ಸೀತಾರಾಮ ನಾಯ್ಕರು ಪತ್ನಿ ಮಕ್ಕಳ ಜೊತೆ ರಸ್ತೆ ಬದಿಗೆ ಸರಿದರು. ಎಷ್ಟು ಬದಿಗೆ ಸರಿದರೂ ಸಹ ಆ ಬಸ್ಸಿನ ಚಾಲಕ ಚಂದನ ಖಾರ್ವಿ ಸೀತಾರಾಮ ನಾಯ್ಕ ಅವರ ಪುತ್ರ ದಿನೇಶ ನಾಯ್ಕ (8) ಅವರಿಗೆ ಬಸ್ಸು ಗುದ್ದಿದರು. ಇದರಿಂದ ದಿನೇಶ ನಾಯ್ಕ ಅವರ ಮುಖ, ಕೈಗೆ ಗಾಯವಾಯಿತು.
ಉಡುಪಿ ಜಿಲ್ಲೆಯ ಕುಂದಾಪುರದ ಬಸ್ ಚಾಲಕ ಚಂದನ ಖಾರ್ವಿ ಅತಿವೇಗ ಹಾಗೂ ದುಡುಕುತನದಿಂದ ತಮಗೆ ಅನ್ಯಾಯವಾಗಿದೆ ಎಂದು ಸೀತಾರಾಮ ನಾಯ್ಕ ದೂರಿದ್ದಾರೆ. ಈ ಬಗ್ಗೆ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ತೆರಳಿ ಪ್ರಕರಣವನ್ನು ದಾಖಲಿಸಿದ್ದಾರೆ.