ಮೈಸೂರು ವಿಶ್ವ ವಿದ್ಯಾಲಯದಿಂದ ರ‍್ಯಾಂಕ್ ಪಡೆದ ಸೀಮಾ ಹೆಗಡೆ ಅವರು 13 ಚಿನ್ನದ ಪದಕ ಪಡೆದಿದ್ದಾರೆ.
ಈ ಹಿಂದೆ ಸೀಮಾ ಹೆಗಡೆ ಅವರು 10 ಬಂಗಾರ ಪದಕ ಪಡೆದಿರುವ ಬಗ್ಗೆ ಮೈಸೂರು ವಿಶ್ವ ವಿದ್ಯಾಲಯ ಘೋಷಿಸಿತ್ತು. ಆದರೆ, ಶುಕ್ರವಾರ 13 ಚಿನ್ನದ ಪದಕ ಗೆದ್ದಿರುವ ಬಗ್ಗೆ ಘೋಷಿಸಿ ಶನಿವಾರ ಆ ಎಲ್ಲಾ ಬಂಗಾರದ ಪದಕವನ್ನು ಅವರಿಗೆ ನೀಡಿ ಪುರಸ್ಕರಿಸಿದೆ.
ಸೀಮಾ ಶ್ಯಾಮ ಹೆಗಡೆ ಅವರು ಯಲ್ಲಾಪುರ ತಾಲೂಕಿನ ಕಳಚೆಯವರಾಗಿದ್ದು, ಪ್ರಸ್ತುತ ಕಾಸರಗೋಡಿನಲ್ಲಿ ವಾಸವಾಗಿದ್ದಾರೆ. ಸ್ನಾತಕೋತ್ತರದ ಪದವಿಯ ರಶಿಯನ್ ಹಾಗೂ ಜರ್ಮನ್ ಭಾಷೆಯ ಪರೀಕ್ಷೆಯಲ್ಲಿ ಅವರು ಶೇ 100ರ ಸಾಧನೆ ಮಾಡಿದ್ದಾರೆ. ದೂರದರ್ಶನದಲ್ಲಿ ಸಹ ಕನ್ನಡ ಹಾಗೂ ಮಲಿಯಾಳಂ ಭಾಷೆಯಲ್ಲಿ ಹಾಡಿದ್ದಾರೆ.
ಭಗವದ್ಗೀತೆ ಸ್ಪರ್ಧೆಗಳಲ್ಲಿ ಸಹ ಭಾಗವಹಿಸುವ ಸೀಮಾ ಹೆಗಡೆ ಭಗವದ್ಗೀತೆ ಹಾಡುಗಾರಿಕೆಯಿಂದ ಗಮನಸೆಳೆದಿದ್ದಾರೆ. ಅವರ ಸಾಧನೆ ಪರಿಗಣಿಸಿ ಮೈಸೂರು ವಿಶ್ವ ವಿದ್ಯಾಲಯ ಚಿನ್ನದ ಪದಕ ಹಾಗೂ ನಗದು ಬಹುಮಾನ ನೀಡಿ ಗೌರವಿಸಿದೆ.