ಧರ್ಮ ಹಾಗೂ ರಾಷ್ಟ್ರ ಜಾಗೃತಿ ಸಂದೇಶ ಸಾರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಇದೀಗ 100ರ ಸಂಭ್ರಮ. ಈ ಹಿನ್ನಲೆ ಭಾನುವಾರ ಯಲ್ಲಾಪುರದಲ್ಲಿ ಸಂಘಟನೆ ಹಾಗೂ ಭಾವನಾತ್ಮಕ ದೃಷ್ಠಿಕೋನದ ವಿಶೇಷ ಕಾರ್ಯಕ್ರಮ ನಡೆಯಿತು.
ಪ್ರತಿ ವರ್ಷ ಸಂಕ್ರಾತಿ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಜನ ಜಾಗೃತಿಯ ಸಂದೇಶ ಸಾರುತ್ತಾರೆ. ಇದರೊಂದಿಗೆ ಧರ್ಮ ಹಾಗೂ ರಾಷ್ಟ್ರ ಜಾಗೃತಿ ವಿಷಯವಾಗಿ ಸಹ ಪಥ ಸಂಚಲನ ನಡೆಸಿ ಜನರಿಗೆ ಭರವಸೆ ಮೂಡಿಸುತ್ತಾರೆ. ಪ್ರಸ್ತುತ ಯಲ್ಲಾಪುರದ ವಿಶ್ವದರ್ಶನ ಆವಾರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಏಕೃತಿಕರಣ, ಬೌದ್ಧಿಕ ಹಾಗೂ ಶಾರೀರಿಕ ಚಟುವಟಿಕೆಗಳು ನಡೆದಿದ್ದು, ನೂರಾರು ಸ್ವಯಂ ಸೇವಕರು ಸ್ವಯಂ ಪ್ರೇರಣೆಯಿಂದ ಭಾಗವಹಿಸಿದ್ದರು.
ಏಕೃತಿಕರಣ ವಿಭಾಗದ ಮೂಲಕ ತಾಲೂಕಿನ ಎಲ್ಲಾ ಶಾಖೆಗಳನ್ನು ಒಟ್ಟುಗೂಡಿಸಿ ಆಗು-ಹೋಗುಗಳ ಬಗ್ಗೆ ಒಂದು ಗಂಟೆಗಳ ಕಾಲ ವಿಮರ್ಶೆ ನಡೆಯಿತು. ಬೌದ್ಧಿಕ ವಿಭಾಗದ ಮೂಲಕ ಮುಕ್ಕಾಲು ತಾಸು ವಿಶೇಷ ಉಪನ್ಯಾಸ ಹಾಗೂ ಹೊಸ ವಿಷಯ ಕಲಿಕೆಗಳ ಬಗ್ಗೆ ವಿವರಣೆ ನೀಡಲಾಯಿತು. ಶಾರಿರೀಕ ಚಟುವಟಿಕೆಯ ಭಾಗವಾಗಿ ಒಂದು ತಾಸು ಆಕರ್ಷಕ ಪಥ ಸಂಚಲನವನ್ನು ಆಯೋಜಿಸಲಾಯಿತು.
ಗಣವೇಷದಾರಿಗಳು ಅತ್ಯಂತ ಶಿಸ್ತಿನಿಂದ ಈ ಪಥ ಸಂಚಲನದಲ್ಲಿ ಸಂಚರಿಸಿದರು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಅನೇಕರು ಭಾಗವಹಿಸಿದ್ದರು. ವಿಶ್ವದರ್ಶನ ಶಾಲಾ ಆವರಣದಿಂದ ಶುರುವಾದ ಪಥಸಂಚಲನ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಕೊನೆಗೆ ವಿಶ್ವದರ್ಶನ ಶಾಲಾ ಆವರಣವನ್ನು ತಲುಪಿ ಮುಕ್ತಾಯವಾಯಿತು. ಭಾರತೀಯ ಜೀವನ ಪದ್ಧತಿ, ವಸುದೇವ ಕುಟುಂಬಕA ಎಂಬ ನಿಲುವಿನಲ್ಲಿ ಬದುಕುವ ಬಗ್ಗೆ ಸಂದೇಶ ಸಾರಲಾಯಿತು.