ಹುಬ್ಬಳ್ಳಿಯಿಂದ ಯಲ್ಲಾಪುರ ಕಡೆ ಬರುತ್ತಿದ್ದ ಆಂಬುಲೆನ್ಸ ಪ್ರಭು ಪುಡ್ ಪ್ಯಾಲೇಸ್ ಬಳಿ ಕಾರಿಗೆ ಡಿಕ್ಕಿಯಾಗಿದೆ.
ಜನವರಿ 18ರಂದು ಉದ್ಯಮನಗರದ ಸಿವಿಲ್ ಗುತ್ತಿಗೆದಾರ ಕೃಷ್ಣ ನಾಯರ್ ಪ್ರಭು ಪುಡ್ ಪ್ಯಾಲೇಸ್ ಬಳಿ ಕಾರು ನಿಲ್ಲಿಸಿದ್ದರು. ಈ ವೇಳೆ ಮಂಗಳೂರಿನ ಮಹಮದ್ ಜುನೈದ್ ಹುಬ್ಬಳ್ಳಿ ಕಡೆಯಿಂದ ವೇಗವಾಗಿ ಆಂಬುಲೆನ್ಸ್ ಓಡಿಸಿಕೊಂಡು ಬಂದರು.
ಆAಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಅಂಚಿನಲ್ಲಿ ನಿಲ್ಲಿಸಿದ ಕೃಷ್ಣ ನಾಯರ್ ಅವರ ಕಾರಿಗೆ ಗುದ್ದಿತು. ಪರಿಣಾಮ ಆಂಬುಲೆನ್ಸ್ ಜೊತೆ ಕಾರು ಸಹ ಜಖಂ ಆಗಿದ್ದು, ಕೃಷ್ಣ ನಾಯರ್ ಅವರು ಪೊಲೀಸ್ ಠಾಣೆಗೆ ತೆರಳಿ ಆಂಬುಲೆನ್ಸ್ ಚಾಲಕನ ವಿರುದ್ಧ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದರು.