6
  • Latest

ಗುಡ್ಡಕ್ಕೆ ಗುದ್ದಿದ ಕಾರು: ಅಪಾಯದಲ್ಲಿದ್ದವರನ್ನು ಆಸ್ಪತ್ರೆಗೆ ಕಳುಹಿಸಿದ ಯುವಕ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗುಡ್ಡಕ್ಕೆ ಗುದ್ದಿದ ಕಾರು: ಅಪಾಯದಲ್ಲಿದ್ದವರನ್ನು ಆಸ್ಪತ್ರೆಗೆ ಕಳುಹಿಸಿದ ಯುವಕ!

AchyutKumar by AchyutKumar
in ಸ್ಥಳೀಯ

ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ಗುಡ್ಡಕ್ಕೆ ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಐದು ಜನ ಗಾಯಗೊಂಡಿದ್ದು, ಬೈಕಿನಲ್ಲಿ ಬರುತ್ತಿದ್ದ ದಿನೇಶ ನಾಯ್ಕ ಅವರೆಲ್ಲರನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಹೊನ್ನಾವರದ ಮಹಿಮೆಯ ರಾಜು ನಾಯ್ಕ ಅವರು ಜನವರಿ 19ರಂದು ಮಹಿಮೆಯಿಂದ ಸಾಗರದ ಕಡೆ ಹೋಗುತ್ತಿದ್ದರು. ಉಪ್ಪೋಣಿಯಿಂದ ಮಾವಿನಗುಂಡಿ ಹೆದ್ದಾರಿಯಲ್ಲಿ ಅವರ ಕಾರು ವೇಗವಾಗಿ ಚಲಿಸಿತು. ಗೇರುಸೊಪ್ಪದ ಬಂಗಾರ ಕುಸುಮ ಜಲಪಾತಕ್ಕಿಂತ ಕೊಂಚ ಮುಂದೆ ರಾಜು ನಾಯ್ಕ ಅವರಿಗೆ ಕಾರಿನ ಮೇಲಿನ ನಿಯಂತ್ರಣ ತಪ್ಪಿತು. ಪರಿಣಾಮ ಹೆದ್ದಾರಿ ಅಂಚಿನ ಗುಡ್ಡಕ್ಕೆ ಆ ಕಾರು ಡಿಕ್ಕಿಯಾಯಿತು.

ಆ ಕಾರಿನಲ್ಲಿ ರಾಜು ನಾಯ್ಕ ಅವರ ಜೊತೆ ಪಾರ್ವತಿ ನಾಯ್ಕ, ತಿಪ್ಪಯ್ಯ ನಾಯ್ಕ, ಪ್ರದೀಪ ನಾಯ್ಕ ಹಾಗೂ ನಾಗವೇಣಿ ನಾಯ್ಕ ಎಂಬಾತರು ಚಲಿಸುತ್ತಿದ್ದರು. ಕಾರು ಡಿಕ್ಕಿಯಾದ ರಭಸಕ್ಕೆ ಅವರೆಲ್ಲರೂ ಕಾರಿನಲ್ಲಿ ಸಿಲುಕಿಕೊಂಡಿದ್ದರು. ಈ ವೇಳೆ ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಹೊನ್ನಾವರ ಉಪ್ಪೋಣಿ ಎಲೆಕೊಟ್ಟಿಗೆಯ ದಿನೇಶ ನಾಯ್ಕ (29) ಸ್ಥಳೀಯರ ನೆರವು ಪಡೆದು ಕಾರಿನಲ್ಲಿ ಸಿಲುಕಿದ್ದವರನ್ನು ಹೊರಗೆ ತಂದರು.

ಅದಾದ ನಂತರ ಗಾಯಗೊಂಡವರನ್ನು ಉಪಚರಿಸಿದರು. ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ ಕೈ ಮಾಡಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಅತಿ ವೇಗವೇ ಈ ಅಪಘಾತಕ್ಕೆ ಕಾರಣವಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡರು.

ShareSendTweetShare
Previous Post

ಅಂದರ್ ಬಾಹರ್ | ಓಡಿ ಹೋದವರು ಐದು ಜನ.. ಸಿಕ್ಕಿ ಬಿದ್ದವರು ಮೂರೇ ಜನ!

Next Post

ಸ್ಥಳೀಯ ಸಂಸ್ಥೆಗೆ ಸೋಮಾರಿ ಅಧಿಕಾರಿ: ಅಸಡ್ಡೆಯ ನೀತಿಗೆ ಡೀಸಿ ಗರಂ!

Next Post

ಸ್ಥಳೀಯ ಸಂಸ್ಥೆಗೆ ಸೋಮಾರಿ ಅಧಿಕಾರಿ: ಅಸಡ್ಡೆಯ ನೀತಿಗೆ ಡೀಸಿ ಗರಂ!

ಯಲ್ಲಾಪುರ ಕಾಂಗ್ರೆಸ್ಸಿನಲ್ಲಿ ಭಿನ್ನಮತ: ನಾಯಕರ ನಿಲುವಿಗೆ ಕಾರ್ಯಕರ್ತರ ಅಸಮಧಾನ!

ಸೇವಾಗುಣದ ಆಪತ್ಬಾಂದವನಿಗೆ ಸನ್ಮಾನ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.