ತರಕಾರಿ ಹೊತ್ತು ಸಾಗುತ್ತಿದ್ದ ಲಾರಿ ಪಲ್ಟಿಯಾಗಿ 10 ಜನ ಸಾವನಪ್ಪಿದ್ದು, ಸಾವನಪ್ಪಿದವರ ಕುಟುಂಬಕ್ಕೆ ಸರ್ಕಾರ ಸಾಂತ್ವಾನ ಹೇಳಿದೆ. ಸಾವನಪ್ಪಿದವರ ಕುಟುಂಬಕ್ಕೆ 8 ತಾಸಿನೊಳಗೆ ಸರ್ಕಾರ ತಲಾ 3 ಲಕ್ಷ ರೂ ಪರಿಹಾರ ವಿತರಿಸಿದೆ. ಇನ್ನೂ ಹೆಚ್ಚಿನ ಪರಿಹಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಒತ್ತಾಯಿಸುವುದಾಗಿ ಸವಣೂರು ಕ್ಷೇತ್ರದ ಶಾಸಕ ಯಾಸೀರ್ ಅಹ್ಮದ ಖಾನ್ ಪಠಾಣ್ ಹೇಳಿದ್ದಾರೆ.
ಅಪಘಾತದ ವಿಷಯ ಅರಿತ ತಕ್ಷಣ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ, ಉಪವಿಭಾಗಾಧಿಕಾರಿ ಕಾವ್ಯರಾಣಿ, ಪೊಲೀಸ್ ಅಧೀಕ್ಷಕ ಎಂ ನಾರಾಯಣ, ಐಜಿಪಿ ಅಮಿತ್ ಸಿಂಗ್, ಶಾಸಕ ಶಿವರಾಮ ಹೆಬ್ಬಾರ್ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆಗಳಿಗೆ ನಿರ್ದೇಶನ ನೀಡಿದರು.
ಕಾರವಾರದಿಂದ ಹೊರಡುವಾಗಲೇ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಪರಿಹಾರದ ಚೆಕ್ ತೆಗೆದುಕೊಂಡು ಬಂದಿದ್ದು, ಶವ ಹಸ್ತಾಂತರದ ವೇಳೆ ಕುಟುಂಬದವರಿಗೆ ಪರಿಹಾರದ ಮೊತ್ತವನ್ನು ನೀಡಿ ಸಾಂತ್ವಾನ ಹೇಳಿದರು. ಕೇಂದ್ರ ಸರ್ಕಾರ ಸಹ ಸಾವನಪ್ಪಿದವರ ಕುಟುಂಬಕ್ಕೆ ತಲಾ ೨ ಲಕ್ಷ ರೂ ಪರಿಹಾರ ಘೋಷಿಸಿದೆ.
ವೈದ್ಯರ ಸೇವೆಗೆ ಮೆಚ್ಚುಗೆ: ತುರ್ತು ಚಿಕಿತ್ಸೆ ನೀಡಿದ ಯಲ್ಲಾಪುರದ ವೈದ್ಯಕೀಯ ಸಿಬ್ಬಂದಿ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದರು. ಪೊಲೀಸರ ಕಾರ್ಯವನ್ನು ಸಹ ಪ್ರಶಂಸಿಸಿದರು. ಸವಣೂರು ಶಾಸಕ ಯಾಸೀರ ಖಾನ್ ಹಾಗೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಸಹ ಆರೋಗ್ಯ ಸಿಬ್ಬಂದಿಯ ಸೇವೆಗೆ ಕೃತಜ್ಞತೆ ಸಲ್ಲಿಸಿದರು.
ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಸವಣೂರು ಶಾಸಕ ಯಾಸೀರ್ ಖಾನ್, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಐಜಿಪಿ ಅಮಿತ್ ಸಿಂಗ್ ಹಾಗೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..