ನಿಧಾನವಾಗಿ ಚಲಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್’ಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರಿನಲ್ಲಿದ್ದ ಗುರುಪ್ಪಾ ಕೊಟಗಿ ಸಾವನಪ್ಪಿದ್ದಾರೆ.
ದಾಂಡೇಲಿ ಸುಭಾಷ ನಗರದ ಗುರುಪ್ಪಾ ಕೊಟಗಿ (75) ಹೊಸದಾಗಿ ಎಲೆಕ್ಟ್ರಿಕ್ ಸ್ಕೂಟಿ ಖರೀದಿಸಿದ್ದರು. ಜನವರಿ 24ರ ಸಂಜೆ ಅವರು ಹಳಿಯಾಳ ಕಡೆಯಿಂದ ದಾಂಡೇಲಿ ಕಡೆ ಸಂಚರಿಸುತ್ತಿದ್ದರು.
ಈ ವೇಳೆ ಬೆಂಗಳೂರಿನ ಕುಮಾರ ಬೂದಪ್ಪ ಎಂಬಾತರು ಹಳಿಯಾಳ ಕಾಗದ ಕಾರ್ಖಾನೆಯಿಂದ ಪೆಪರ್ ತುಂಬಿಕೊAಡು ವೇಗವಾಗಿ ಹೊರಟರು. ಗುರುಪ್ಪಾ ಕೊಟಗಿ ಅವರ ಸ್ಕೂಟರಿಗೆ ಲಾರಿ ಡಿಕ್ಕಿ ಹೊಡೆದರು.
ಪರಿಣಾಮ ನೆಲಕ್ಕೆ ಅಪ್ಪಳಿಸಿದ ಗುರುಪ್ಪಾ ಕೊಟಗಿ ಅವರು ಅಲ್ಲಿಯೇ ಸಾವನಪ್ಪಿದರು. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಸಾವನಪ್ಪಿದವರ ಪುತ್ರ ದಯಾನಂದ ಕೊಟಗಿ ಅವರು ಪ್ರಕರಣ ದಾಖಲಿಸಿದ್ದಾರೆ.