ಮಟ್ಕಾ ಆಟದಲ್ಲಿ ತೊಡಗಿದ್ದ ಪಾನ್ ಅಂಗಡಿ ಮಾಲಕರಿಬ್ಬರ ವಿರುದ್ಧ ಮುಂಡಗೋಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಿದ್ದಾಪುರ ಪೊಲೀಸರು ಚಾಲಕನೊಬ್ಬ ಮಟ್ಕಾ ಆಡಿಸುತ್ತಿರುವುದನ್ನು ಪತ್ತೆ ಮಾಡಿದ್ದಾರೆ.
ಮುಂಡಗೋಡಿನ ಬಂಕಾಪುರ ರಸ್ತೆಯ ಅಣ್ತಮ್ಮ ಹೊಟೇಲ್ ಬಳಿ ಪಾನ್ ಅಂಗಡಿ ನಡೆಸುವ ಮಾರಿಕಾಂಬಾ ನಗರದ ಶಂಕರ ಸಾಳುಂಕೆ ಹಾಗೂ ಸುಭಾಷ ನಗರದ ಆನಂದ ಲಮಾಣಿ ಮಟ್ಕಾ ಆಟ ನಡೆಸುತ್ತಿದ್ದರು.
ಜನವರಿ 24ರಂದು ಅವರು ಕಾನೂನುಬಾಹಿರ ಆಟದಲ್ಲಿದ್ದಾಗ ಮುಂಡಗೋಡ ಸಿಪಿಐ ರಂಗನಾಥ ನೀಲಮ್ಮನವರ ದಾಳಿ ಮಾಡಿದರು. ಆ ವೇಳೆ ಅವರಿಬ್ಬರ ಬಳಿ ಜನರಿಂದ ಸಂಗ್ರಹಿಸಿದ್ದ 2220ರೂ ಹಣ ಸಿಕ್ಕಿದೆ. ಆಮೀಷ ಒಡ್ಡಿ ಹಣ ಪಡೆದ ಕಾರಣ ಪೊಲೀಸರು ಕ್ರಮ ಜರುಗಿಸಿದ್ದಾರೆ.
ಸಿದ್ದಾಪುರ ಪೊಲೀಸರು ಮಟ್ಕಾ ಆಟದಲ್ಲಿ ನಿರತರಾಗಿದ್ದ ಮಂಜುನಾಥ ಗೊಂಡ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಂಡ್ಲಿಕೊಪ್ಪ ನೀಡಗೋಡದ ಮಂಜುನಾಥ ಗೊಂಡ ಚಾಲಕರಾಗಿದ್ದು, ಮಾಸ್ತೋಕಾಂಬಾ ದೇವಾಲಯ ಬಳಿ ಮಟ್ಕಾ ಆಡಿಸುತ್ತಿದ್ದರು. ಜನವರಿ 24ರಂದು ಅವರ ಮೇಲೆ ದಾಳಿ ನಡೆಸಿದ ಪೊಲೀಸರಿಗೆ 650 ರೂ ಹಣದ ಜೊತೆ ಮಟ್ಕಾ ಪರಿಕರಗಳು ಸಿಕ್ಕಿವೆ. ಪಿಎಸ್‌ಐ ಅನೀಲ ಬಿ ಎಂ ಈ ದಾಳಿ ನಡೆಸಿದ್ದಾರೆ.