ಗೋ ಪ್ರೇಮಿ ಪೊಲೀಸರು ಹಾಗೂ ಗೊ ಭಕ್ಷಕ ಫೈಜಾನ್ ನಡುವೆ ನಡೆದ ಕಾಳಗದಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಫೈಜಾನ್ ಕಾಲಿಗೆ ಪೆಟ್ಟಾಗಿದ್ದು, ಆತನಿಗೆ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಹೊನ್ನಾವರ ತಾಲೂಕಿನ ಸಾಲ್ಕೊಡು ಕೊಂಡಾಕುಳಿ ಬಳಿ ಹಸು ಕೊಂದು ಅದರ ಹೊಟ್ಟೆಯಲ್ಲಿದ್ದ ಕರುವನ್ನು ಬಿಸಾಡಿದ ಪ್ರಕರಣ ವಿಷಯವಾಗಿ ಪೊಲೀಸರು ಮೊದಲು ತೌಫಿಕ್ ಎಂಬಾತನನ್ನು ಬಂಧಿಸಿದ್ದರು. ಆತ ನೀಡಿದ ಮಾಹಿತಿ ಪ್ರಕಾರ ಗೋ ವಧೆ ನಡೆಸಿದ್ದ ಹೊನ್ನಾವರ ಕಾಸರಕೋಡಿನ ಫೈಜಾನನನ್ನು ವಶಕ್ಕೆ ಪಡೆದಿದ್ದರು. 19 ವರ್ಷದ ಫೈಜಾನ್ ಪೊಲೀಸರ ಮೇಲೆ ಸಿಟ್ಟಾಗಿದ್ದ. ಈ ಹಿನ್ನಲೆ ಜನವರಿ 25ರ ಸಂಜೆ ಆಯುಧ ಜಪ್ತಿ ವೇಳೆ ತೆರಳಿದಾಗ ಅದೇ ಬಗೆಯ ಆಯುಧದಿಂದ ಪೊಲೀಸರ ಮೇಲೆ ದಾಳಿ ನಡೆಸಿದ್ದ. ಇದರಿಂದ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.
ದುಗ್ಗುರು ರಸ್ತೆ ಹತ್ತಿರ ಪೈಜಾನ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಹೊನ್ನಾವರ ಪಿಐ ಸಿದ್ಧರಾಮೇಶ್ವರ, ಪಿಎಸ್‌ಐ ರಾಜಶೇಖರ ವಂದಲಿ, ಪೊಲೀಸ್ ಸಿಬ್ಬಂದಿ ಗಜಾನನ ನಾಯ್ಕ ಹಾಗೂ ಗಣೇಶ ಬಡ್ನಿ ಮೇಲೆ ಆತ ಮಾರಕಾಸ್ತç ಬೀಸಿದ್ದು, ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದರು. ಈ ದಾಳಿಯಲ್ಲಿ ಸಿದ್ಧರಾಮೇಶ್ವರ ಅವರಿಗೆ ಮೈ-ಕೈಗೆ ಪೆಟ್ಟಾಗಿದೆ. ರಾಜಶೇಖರ ವಂದಿ ಅವರಿಗೆ ಕೆನ್ನೆ, ಕೈ ಹಾಗೂ ಕಾಲಿಗೆ ಗಾಯವಾಗಿದೆ. ಗಜಾನನ ನಾಯ್ಕ ಹಾಗೂ ಗಣೇಶ ಬಡ್ನಿ ಅವರ ಕೈಯಿಂದ ರಕ್ತ ಸುರಿದಿದೆ. ಫೈಜಾನನ ಕಾಲಿನೊಳಗೆ ಗುಂಡೇಟು ಬಿದ್ದ ನಂತರ ಆತ ಪೊಲೀಸರಿಗೆ ಶರಣಾಗಿದ್ದು, ವೈದ್ಯರು ಆತನ ಕಾಲಿನ ಗುಂಡು ತೆಗೆದಿದ್ದಾರೆ. ಪೊಲೀಸರು ಸಹ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಗುಂಡೇಟಿನಿoದ ಗಾಯಗೊಂಡ ಗೋ ಭಕ್ಷಕನನ್ನು ಆಸ್ಪತ್ರೆಗೆ ಕರೆದೊಯ್ದ ವಿಡಿಯೋ ಇಲ್ಲಿ ನೋಡಿ..