ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಕೆಲ ಉದ್ದಿಮೆ, ಕಂಪನಿ ಹಾಗೂ ಕೆಲ ಬ್ಯಾಂಕು-ಸಹಕಾರಿ ಸಂಘಗಗಳನ್ನು ಹೊರತುಪಡಿಸಿ ಉಳಿದ ಕಡೆ ಅದ್ಧೂರಿ ಗಣರಾಜ್ಯೋತ್ಸವದ ಆಚರಣೆ ನಡೆದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೆಲ ಸಂಘ-ಸ0ಸ್ಥೆಯವರು ಗಣರಾಜ್ಯೋತ್ಸವದಿಂದ ದೂರ ಉಳಿದಿದ್ದಾರೆ.
ಜಿಲ್ಲಾಕೇಂದ್ರ ಕಾರವಾರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ ಧ್ವಜಾರೋರಣ ಮಾಡಿದರು. ನಂತರ ಮಾತನಾಡಿದ ಅವರು `ನಮ್ಮ ಸಂವಿಧಾನದಲ್ಲಿನ ಸಮಾನತೆಯ ಆಶಯದಂತೆ ಸಮಾಜದಲ್ಲಿನ ಕಟ್ಟ ಕಡೆಯ ವ್ಯಕ್ತಿಯೂ ನೆಮ್ಮದಿಯಿಂದ ಜೀವನ ನಡೆಸಲು ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು. ರಾಜ್ಯದಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ನೆಮ್ಮದಿಯ ಜೀವನ ನಡೆಸಲು ಅಗತ್ಯವಿರುವ ಸೌಲಭ್ಯ ಮತ್ತು ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯನಿರ್ವಹಿಸುತ್ತಿದೆ’ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪೊಲೀಸ್, ಅರಣ್ಯ, ಗೃಹರಕ್ಷಕ ದಳ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ ತಂಡಗಳಿAದ ಆಕರ್ಷಕ ಪಥ ಸಂಚಲನ ನಡೆಯಿತು. ಕಂದಾಯ ಇಲಾಖೆ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಜಿಲ್ಲಾ ನಗರಾಭಿವೃದ್ದಿ ಕೋಶದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಸಿಬ್ಬಂದಿಗಳಿಗೆ ಮತ್ತು ಶೈಕ್ಷಣಿಕ ಹಾಗೂ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ವಿಶೇಷ ಆಹಾರದ ಕಿಟ್ ವಿತರಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ರಾಷ್ಟç ಪ್ರೇಮ ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವಾರ್ತಾ ಇಲಾಖೆಯಲ್ಲಿ ಗಣರಾಜ್ಯೋತ್ಸವ
ಕಾರವಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರವಾರ ಕಚೇರಿಯಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು.
ಕಚೇರಿಯ ನಿವೃತ್ತ ಸಿಬ್ಬಂದಿ ಶ್ಯಾಮ ದತ್ತಾ ತಳೇಕರ ರಾಷ್ಟ ಧ್ವಜಾರೋರಣ ನೆರವೇರಿಸಿದರು. ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಬಿ ಶಿವಕುಮಾರ್, ಸಿಬ್ಬಂದಿ ರಾಜು ಭೋವಿ, ಗಂಗಾಧರ ಚಲವಾದಿ, ಕಮಲಾ ನಾಯ್ಕ, ರಾಘವೇಂದ್ರ ತಡಸದ, ವಿ ಮನೋಹರ, ಅಪ್ರೆಂಟಿಸ್‌ಗಳಾದ ಮುತ್ತುರಾಜ ಕೆ ನಾಗರತ್ನ, ಪತ್ರಕರ್ತರು ಹಾಗೂ ಹವಾಮಾನ ಇಲಾಖೆಯ ಸಿಬ್ಬಂದಿ ಇದ್ದರು.
ನಗೆ ಶಾಲೆಯಲ್ಲಿ ಅದ್ಧೂರಿ ಗಣರಾಜ್ಯೋತ್ಸವ
ಕಾರವಾರದ ನಗೆ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗಿದ್ದು, ಶಾಲೆಯ ಮುಖ್ಯ ಶಿಕ್ಷಕ ಅಕ್ತರ ಸಯ್ಯದ್ ಧ್ವಜಾರೋಹಣ ಮಾಡಿದರು.
ಧ್ವಜಾರೋಹಣಕ್ಕೂ ಮುನ್ನ ಮಹಾತ್ಮ ಗಾಂಧೀಜಿ ಹಾಗೂ ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಕ್ಕಳು ಮನೆ ಮನೆಯಿಂದ ತಂದ ಹೂವುಗಳೊಂದಿಗೆ ನಮನ ಸಲ್ಲಿಸಲಾಯಿತು. ಊರಿನ ಯುವಕ-ಯವತಿ ಮಂಡಳ, ವಿವಿಧ ಸಂಘ-ಸ0ಸ್ಥೆಯವರು ಉತ್ಸಾಹದಿಂದ ಧ್ವಜಾರೋಹಣದಲ್ಲಿ ಭಾಗವಹಿಸಿದ್ದರು. ಶಾಲಾ ಆಡಳಿತ ಮಂಡಳಿಯವರು ಆಗಮಿಸಿ ಆವರಣವನ್ನು ಅಲಂಕರಿಸಿದ್ದರು.
ಈ ವೇಳೆ ಶಾಲಾ ಮಕ್ಕಳಿಂದ ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ಭಾಷಣ ಮತ್ತು ಗಾಯನ ನಡೆದವು. ಎರಡು ಗಂಟೆಗಳ ಕಾಲ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮದಲ್ಲಿ ಊರಿನವರು ಹರ್ಷದಿಂದ ಭಾಗವಹಿಸಿದ್ದರು.
ಶಾಲೆಯ ಸಹ ಶಿಕ್ಷಕಿ ರೂಪಾ ಉಮೇಶ ನಾಯ್ಕ ಅವರು ಧ್ವಜವಂದನೆ ಮಾಡಿದರು. ಅತಿಥಿ ಶಿಕ್ಷಕಿಯರಾದ ರೇಷ್ಮಾ ಹುಲಸ್ವಾರ, ಪ್ರಿಯಾ ಲಾಂಜೇಕರ್ ನಿರ್ವಹಿಸಿದರು. ಅಡುಗೆ ಸಿಬ್ಬಂದಿ ಶೋಭಾ ಗೌಡ, ಕಾಂಚನಾ ಗೌಡ, ಎಸ್‌ಡಿಎಂಸಿಯ ಕೇಶವ ಗಾಂವ್ಕರ್, ಈರಾ ಗೌಡ, ದಿನೇಶ ಗೌಡ, ಲಕ್ಷಿöÃ ಶಿವಾ ಗೌಡ ಇನ್ನಿತರರು ಭಾಗವಹಿಸಿದ್ದರು.