ಮೇವಿಗೆ ತೆರಳಿದ್ದ ಹಸುವನ್ನು ತುಂಡರಿಸಿದ ದುಷ್ಟರು ಅದರ ಮಾಂಸವನ್ನು ಮದುವೆ ಕಾರ್ಯಕ್ರಮಕ್ಕೆ ಸರಬರಾಜು ಮಾಡಿದ್ದ ವಿಷಯ ಇದೀಗ ಹೊರ ಬಿದ್ದಿದೆ. ಗೋ ಕಳ್ಳತನ – ಗೋ ವಧೆ ಪ್ರಕರಣ ಭೇದಿಸಲು ಪೊಲೀಸರು ಆರು ತಂಡಗಳನ್ನು ರಚಿಸಿದ್ದು, ತನಿಖೆಯ ಆಳ-ಅಗಲ ಹೆಚ್ಚಾದಂತೆ ಇನ್ನಷ್ಟು ಸತ್ಯಗಳು ಹೊರ ಬರುತ್ತಿವೆ.
ತನಿಖಾ ತಂಡದ ಸದಸ್ಯರು ಈವರೆಗೆ 400ಕ್ಕೂ ಅಧಿಕ ಜನರ ವಿಚಾರಣೆ ನಡೆಸಿದ್ದಾರೆ. ಅವರು ನೀಡಿದ ಮಾಹಿತಿ ಆಧರಿಸಿ ಹೊನ್ನಾವರದ ಸಾಲ್ಕೊಡದಲ್ಲಿ ಮೇವಿಗೆ ತೆರಳಿದ್ದ ಗರ್ಭಿಣಿ ಗೋವು ಕೊಂದ ತೌಫಿಕ್ ಹಾಗೂ ಫೈಜಾನ್ ಎಂಬಾತರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದ ವಾಸೀಂ ಹಾಗೂ ಮುಜಾಮಿಲ್ ಎಂಬಾತರ ಹುಡುಕಾಟ ಮುಂದುವರೆದಿದೆ. ವಾಸೀಂ ಹಾಗೂ ಮುಜಾಮಿಲ್ ತಲೆಮರೆಸಿಕೊಂಡಿದ್ದಾರೆ. ಹೀಗಾಗಿ ಅವರ ಸುಳಿವು ನೀಡಿದವರಿಗೆ ಪೊಲೀಸರು 50 ಸಾವಿರ ರೂ ಬಹುಮಾನ ಘೋಷಿಸಿದ್ದಾರೆ!
ಈ ನಾಲ್ವರು ಸೇರಿ ಭಟ್ಕಳದ ಮದುವೆಗೆ ಹಸುವಿನ ಮಾಂಸ ಪೂರೈಸುವ ಗುತ್ತಿಗೆ ಪಡೆದಿದ್ದರು. ಅದಕ್ಕಾಗಿ 7500ರೂ ಹಣವನ್ನು ಮುಂಗಡವಾಗಿ ಪಡೆದಿದ್ದರು. ಮೇವಿಗೆ ತೆರಳಿದ್ದ ಗೋವನ್ನು ಅಪಹರಿಸಿ ತಲೆ ತುಂಡರಿಸಿದ್ದರು. ಗೋವಿನ ಗರ್ಭದಲ್ಲಿದ್ದ ಕರುವನ್ನು ಸಹ ಕಾಡಿನಲ್ಲಿ ಬಿಸಾಡಿ ಮಾಂಸ ಅಪಹರಿಸಿದ್ದರು. ಅಲ್ಪ ಪ್ರಮಾಣದ ಮಾಂಸವನ್ನು ಫೈಯಾಜ್ ಪಾರ್ಟಿ ಮಾಡುವುದಕ್ಕಾಗಿ ಬೇರೆಡೆ ಎತ್ತಿಟ್ಟುಕೊಂಡಿದ್ದು, ಸಾವನಪ್ಪಿದ ಹಸುವಿನಿಂದ ಬಿದ್ದ ರಕ್ತದ ಕಲೆ ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿಗಳಿಬ್ಬರು ಸಿಕ್ಕಿ ಬಿದ್ದಿದ್ದಾರೆ.
ಈ ಎಲ್ಲಾ ವಿಷಯಗಳ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಮಾಹಿತಿ ನೀಡಿದ್ದಾರೆ. ದುಷ್ಟರ ಬಗ್ಗೆ ಮಾಹಿತಿಯಿದ್ದವರು ಇಲ್ಲಿ ಫೋನ್ ಮಾಡಿ: 9480805200