ಮಾನವನ ಸಾವಿಗೆ ಕಾರಣವಾಗಬಲ್ಲ ಕಳ್ಳಭಟ್ಟಿ ಸರಾಯಿ ತಯಾರಿಸುತ್ತಿದ್ದ ಸಂಗೀತಾ ಕಂಜರಬಾಟ ಎಂಬಾಕೆಯ ಮನೆ ಮುಂದೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ರಸ್ತೆ ಬೀದಿಯಲ್ಲಿ ನಿಂತು ಪಾನಕ ಹಂಚಿದAತೆ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ಆಕೆಯ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಜರುಗಿಸಿದ್ದಾರೆ.
ದಾಂಡೇಲಿಯ ಗಾಂಧೀನಗರದಲ್ಲಿ ವಾಸಿಸುವ ಸಂಗೀತಾ ಕಂಜರಬಾಟ ಕೂಲಿ ಕೆಲಸದ ಜೊತೆ ಕಳ್ಳಭಟ್ಟಿ ಸರಾಯಿಯನ್ನು ತಯಾರಿಸುತ್ತಿದ್ದರು. ಅನುದಿನವೂ ಅದನ್ನು ಮಾರಾಟ ಮಾಡಿ ಕಾಸು ಸಂಪಾದಿಸುತ್ತಿದ್ದರು. ಕಳ್ಳಭಟ್ಟಿ ಸರಾಯಿ ಕುಡಿದರೆ ಜನ ಸಾವನಪ್ಪುತ್ತಾರೆ ಎನ್ನುವ ಬಗ್ಗೆ ಅರಿವಿದ್ದರೂ `ಏನೂ ಆಗುವುದಿಲ್ಲ’ ಎಂದು ನಂಬಿಸಿ ಮಾರಾಟ ಮಾಡುತ್ತಿದ್ದರು. ಅವರ ಮನೆ ಬಳಿ ಹಾದು ಹೋಗುವವರನ್ನು ಕರೆದು ಲೋಟದಲ್ಲಿ ಬಡಿಸಿ ಕಳ್ಳಭಟ್ಟಿ ಸರಾಯಿ ಕುಡಿಸುತ್ತಿದ್ದರು.
ಜನವರಿ 25ರಂದು ಸಂಗೀತ ಬಿಳಿ ಬಣ್ಣದ ಕ್ಯಾನಿನಲ್ಲಿ 3 ಲೀಟರ್ ಬಳಿ ಬಣ್ಣದ ಕಳ್ಳಭಟ್ಟಿ ಸರಾಯಿ ಹಿಡಿದಿದ್ದರು. ಎರಡು ಲೋಟಗಳ ಮೂಲಕ ಅದನ್ನು ಹಲವರಿಗೆ ಹಂಚಿ ಕಾಸು ಪಡೆಯುತ್ತಿದ್ದರು. ಪಿಎಸ್‌ಐ ಕಿರಣ ಪಾಟೀಲ ಇದನ್ನು ನೋಡಿ ಪ್ರಶ್ನಿಸಿದರು. ಸರಿಯಾಗಿ ಉತ್ತರ ದೊರೆಯದಿದ್ದಾಗ ದಾಳಿ ನಡೆಸಿ ಕಳ್ಳಭಟ್ಟಿ ವಿಷಯವನ್ನು ಬಯಲಿಗೆಳೆದರು. ಈ ದಿನ ಕಳ್ಳಭಟ್ಟಿ ವ್ಯಾಪಾರದಿಂದ ಸಂಗೀತಾ ಸಂಗ್ರಹಿಸಿದ್ದ 360ರೂ ಹಣವನ್ನು ಅವರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು.