ವಿಶೇಷ ಚೇತನರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಕಾರವಾರದ ಆಶಾನಿಕೇತನ ಕಿವುಡ ಹಾಗೂ ಮೂಗ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಗಣರಾಜ್ಯೋತ್ಸವದ ದಿನದಂದು ಸಾಧಕ ಮಕ್ಕಳಿಗೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಪ್ರಮಾಣ ಪತ್ರ ವಿತರಿಸಿದರು.
ರಾಜ್ಯ ಮಟ್ಟದ ಜಾವೆಲಿನ್ ಹಾಗೂ ಶಾರ್ಟ್ ಪುಟ್ ಎಸೆತದಲ್ಲಿ ಸ್ನೇಹಬಾಬು ನೆಲಬಾಯಿ ಅವರು ದ್ವಿತೀಯ ಸ್ಥಾನ ಪಡೆದಿದ್ದಾರೆ. ಜಾವೆಲಿನ್ ಹಾಗೂ ಓಟದಲ್ಲಿ ವೈಷ್ಣವಿ ಕೋಲಾಕರ್ ದ್ವಿತೀಯ ಬಹುಮಾನ ಪಡೆದಿದ್ದಾರೆ. ಶಾರ್ಟ್ ಪುಟ್ ಮತ್ತು ಓಟದಲ್ಲಿ ಒಲಿವಿಯಾ ಕ್ರಿಸ್ತಾ ಹಾಗೂ ಜೋಯ್ಸಿ ಜೇಮ್ಸ್ ಸಮಾಧಾನಕರ ಬಹುಮಾನ ಪಡೆದಿದ್ದಾರೆ. ಈ ಎಲ್ಲಾ ಮಕ್ಕಳ ಸಾಧನೆಗೆ ಮಾಧವ ನಾಯಕ ಅವರು ಮೆಚ್ಚುಗೆವ್ಯಕ್ತಪಡಿಸಿದರು.
ಗಣರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮಾಧವ ನಾಯಕ ಅವರು `ಭಾರತದ ಸಂವಿಧಾನವನ್ನು ಸ್ವೀಕರಿಸಿ, ಶಾಸನವನ್ನಾಗಿ ವಿಧಿಸಿಕೊಂಡ ಈ ದಿನವನ್ನು ನಾವೆಲ್ಲ ಸಂಭ್ರಮದಿoದ ಆಚರಿಸುತ್ತಿದ್ದೇವೆ. ವಿಶೇಷ ಚೇತನ ಮಕ್ಕಳಲ್ಲಿ ಅಂಗಗಳ ನ್ಯೂನ್ಯತೆಯಿದ್ದರೂ ಇತರರಿಗಿಂತಲೂ ವಿಶೇಷ ಶಕ್ತಿ ಅಡಗಿದೆ’ ಎಂದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟೆರ್ ಲಿನೆಟ್, ಶಿಕ್ಷಕರಾದ ವಿನಯಪ್ರಭಾ, ಸುಗಂಧ, ಆಶಾ ಹೆಗಡೆ, ಸಿಸ್ಟೆರ್ ಪೂಜಾ, ಸಿಸ್ಟೆರ್ ಶಿಲ್ಪ ಗುನಗಿ, ಸಿಸ್ಟೆರ್ ಜಾನಕಿ ಬಾಡ್ಕರ್ ಇದ್ದರು.