ಕಪ್ಪು ಬಣ್ಣದ ಕೋಟು ಧರಿಸಿ ಕ್ಯಾಲೇಂಡರ್ ಹಾಗೂ ಡೈರಿ ಬಿಡುಗಡೆಗೆ ಆಗಮಿಸಿದ್ದ ಕಾರವಾರ ಉಪವಿಭಾಗಾಧಿಕಾರಿ ಕನಿಷ್ಕ ಶರ್ಮ ಡೈರಿಯ ಬಣ್ಣ ಕಪ್ಪಾಗಿರುವ ಕಾರಣ ಸಿಡಿಮಿಡಿಗೊಂಡರು!
ಗ್ರಾಮ ಲೆಕ್ಕಾಧಿಕಾರಿ ಸಂಘದವರು ಹೊಸ ವರ್ಷದ ಕ್ಯಾಲೆಂಡರ್ ಹಾಗೂ ಡೈರಿ ಸಿದ್ದಪಡಿಸಿದ್ದು, ಶನಿವಾರ ಅದನ್ನು ಬಿಡುಗಡೆ ಮಾಡಿದರು. ಸಭಾ ಕಾರ್ಯಕ್ರಮ ಮುಗಿದ ನಂತರ ಡೈರಿಯ ಪುಟ ಹಾಗೂ ಬಣ್ಣದ ಬಗ್ಗೆ ಕನಿಷ್ಕ ಶರ್ಮ ಅಸಮಧಾನ ವ್ಯಕ್ತಪಡಿಸಿದರು.
ಸಭೆ ಮುಗಿದ ನಂತರ ಕಾರವಾರ ತಾಲೂಕು ತಹಶೀಲ್ದಾರ್ ನೊರೊನ್ಹಾ ಹಾಗೂ ಉಪವಿಭಾಗದ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಹಾಯಕ ಆಯುಕ್ತರು ಹತ್ತಿರ ಕರೆದರು. `ಡೈರಿ ಹಾಗೂ ಕ್ಯಾಲೆಂಡರ್ ಬಿಡುಗಡೆಯಂಥ ಉತ್ತಮ ಕೆಲಸ ಮಾಡಿದ್ದೀರಿ. ಆದರೆ, ಡೈರಿಯ ಬಣ್ಣವನ್ನು ಯಾಕೆ ಕಪ್ಪಾಗಿಸಿದ್ದೀರಿ?’ ಎಂದು ಪ್ರಶ್ನಿಸಿದರು.
`ಡೈರಿಗೆ ಕಪ್ಪು ಬಣ್ಣದ ರಕ್ಷಾ ಕವಚ ಬಳಸುವ ಬದಲು ಬೇರೆ ಬಣ್ಣ ಬಳಸಲು ಸಾಧ್ಯವಾಗಿಲ್ಲವೇ?’ ಎನ್ನುತ್ತ ತಮ್ಮ ಅಸಮಧಾನ ಹೊರಹಾಕಿದರು. `ಒಳ್ಳೆಯ ಕೆಲಸವನ್ನು ಕಪ್ಪು ಬಣ್ಣದಿಂದ ಆರಂಭಿಸಿರುವುದು ಸೂಕ್ತವೇ? ಎಂದು ಮತ್ತೆ ಪ್ರಶ್ನಿಸಿದರು. ಅಲ್ಲಿದ್ದ ಅಧಿಕಾರಿಗಳು ಮೇಲಧಿಕಾರಿಗಳಿಗೆ ಸಮಜಾಯಿಶಿಕೊಡುವ ಸಾಹಸಕ್ಕೆ ಮುಂದಾಗದೇ ಮೌನವಾದರು.