ಗೋ ಕಳ್ಳತನ, ಗೋ ವಧೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಫೈಜಾನ್ ಎಂಬಾತನ ಮೇಲೆ ಪೊಲೀಸರು ಗುಂಡು ಹೊಡೆದಿದ್ದಾರೆ.
ಆಯುಧ ಜಪ್ತಿ ಹಾಗೂ ಪಂಚನಾಮೆ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಫೈಜಾನ್ ಗುಂಡಿನ ಏಟಿನಿಂದ ಗಾಯಗೊಂಡು ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊನ್ನಾವರ ತಾಲೂಕಿ ಸಾಲ್ಕೊಡು ಕೊಂಡಾಕುಳಿ ಬಳಿ ಹಸು ಕೊಂದು ಅದರ ಹೊಟ್ಟೆಯಲ್ಲಿದ್ದ ಕರುವನ್ನು ಬಿಸಾಡಿದ ಪ್ರಕರಣವನ್ನು ಪೊಲೀಸರು ಗಂಭಿರವಾಗಿ ಪರಿಗಣಿಸಿದ್ದಾರೆ. ತೌಫಿಕ್ ಎಂಬ ಆರೋಪಿಯನ್ನು ಬಂಧಿಸಿದ ಪೊಲೀಸರು ಫೈಜಾನ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದ್ದರು.
ಆತನಿಂದ ಗೋ ಹತ್ಯೆಗೆ ಬಳಸಿದ ಆಯುಧ ಜಪ್ತು ಮಾಡಿಕೊಳ್ಳಲು ತೆರಳಿದ್ದರು. ಈ ವೇಳೆ ಫೈಜಾನ್ ಅದೇ ಬಗೆಯ ಆಯುಧದಿಂದ ಪೊಲೀಸರ ಮೇಲೆ ದಾಳಿ ನಡೆಸಿದ್ದು, ಸ್ವಯಂ ರಕ್ಷಣೆಗಾಗಿ ಪೊಲೀಸರು ಪ್ರತಿ ದಾಳಿ ನಡೆಸಿದ್ದಾರೆ.
ಈ ದಾಳಿಯಲ್ಲಿ ಪೊಲೀಸರಿಗೂ ಪೆಟ್ಟಾಗಿದೆ. ಅವರೂ ಚಿಕಿತ್ಸೆಗೆ ದಾಖಲಾಗಿದ್ದಾರೆ. ಗಾಯಗೊಂಡ ಆರೋಪಿಯನ್ನು ಕಾರವಾರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.