ನಿವೃತ್ತ ಯೋಧರು, ಸಾಧಕ ಕೃಷಿಕರು, ಸ್ವಚ್ಛತೆಗೆ ಒತ್ತು ನೀಡುವ ಪೌರ ಕಾರ್ಮಿಕರನ್ನು ಒಳಗೊಂಡು ಹಲವು ರಂಗದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗಣಪತಿ ಗಲ್ಲಿ ಶಾಲೆಯಲ್ಲಿ ಗೌರವಿಸಲಾಗಿದೆ.
ಯಲ್ಲಾಪುರದ ಗಣಪತಿ ಗಲ್ಲಿ ಶಾಲೆಯಲ್ಲಿ ವಿದ್ಯಾಗಮಾ ಕಲಾ ಮಂದಿರ ಉದ್ಘಾಟನೆ ನಡೆದಿದ್ದು, ಇದೇ ವೇಳೆ ಪ್ರಜಾಪ್ರಭುತ್ವದ ಅಮೃತ ಮಹೋತ್ಸವ, ಪರಾಕ್ರಮ ದಿನ, ಮತದಾರರ ಜಾಗೃತಿ ದಿನದ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕಾರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಮೊದಲು ಸಂಘಟಕರು ಸನ್ಮಾನಿಸಿದರು. ಅದಾದ ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಿ, ವಿದ್ಯಾರ್ಥಿಗಳನ್ನು ಸಹ ಪ್ರೋತ್ಸಾಹಿಸಲಾಯಿತು.
ದೇಶ ರಕ್ಷಣೆಗಾಗಿ ಶ್ರಮಿಸಿದ ನಿವೃತ್ತ ಯೋಧರಾದ ಫಕೀರ ಗೊಂದಲಿ, ಮಾಧವಚಂದ್ರ ಪಂಡ್ರಾಪುರ, ಸುಧೀರ್ ನಾಯ್ಕ, ಎ ಯು ಮುಲ್ಲಾ, ತುಳಸಿದಾಸ ನಾಯ್ಕ, ಮನೋಜ ಪಾಟೀಲ್, ಮೋಹನ್ ನಾಯ್ಕ, ಪ್ರಭಾಕರ ನಾಯ್ಕ, ವಿ ಟಿ ಭಟ್ ಹಾಗೂ ಕುಮಾರ ಗದ್ದನಕೇರಿ ಈ ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸಿದರು. ಪಟ್ಟಣ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರ ಕಾರ್ಮಿಕರಾದ ವಿಜಯ್ ಕುಮಾರ ಮಾದರ ಹಾಗೂ ಕುಮಾರ ಮಾದರ ಅವರ ಶ್ರಮವನ್ನು ಈ ವೇದಿಕೆಯಲ್ಲಿ ಗುರುತಿಸಿ ಗೌರವಿಸಲಾಯಿತು. ಇದರೊಂದಿಗೆ ಪ ಪಂ ಅಧ್ಯಕ್ಷೆ ನರ್ಮಾದಾ ನಾಯ್ಕ, ಉಪಾಧ್ಯಕ್ಷ ಅಮಿತ್ ಅಂಗಡಿ ಹಾಗೂ ಗಣಪತಿ ಗಲ್ಲಿ ಪ್ರತಿನಿಧಿಸುವ ಪ ಪಂ ಸದಸ್ಯ ಗುರು ಗೋಸಾವಿ ಅವರನ್ನು ಸನ್ಮಾನಿಸಲಾಯಿತು.
ಪಟ್ಟಣದ ಅಭಿವೃದ್ಧಿ ಚಟುವಟಿಕೆಗಳಲ್ಲಿ ಸಕ್ರೀಯವಾಗಿರುವ ವೀಣಾ ಯಲ್ಲಾಪುರಕರ, ರಾಮು ನಾಯ್ಕ, ಎಂ ಡಿ ಮುಲ್ಲಾ ಅವರನ್ನು ಶಾಲೆಯವರು ಗೌರವಿಸಿದರು. ಈ ಹಿಂದೆ ತಾಲೂಕು ಪಂಚಾಯತ ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದ ಉಲ್ಲಾಸ ಶಾನಭಾಗ ಹಾಗೂ ರವಿ ಕೈಟಕರ್ ಅವರನ್ನು ಸನ್ಮಾನಿಸಲಾಯಿತು. ಉತ್ತಮ ಕೃಷಿಕ ಶಾಮುಖ ಪಾಟೀಲ್, ಉದ್ಯಮಿ ಬಿ ಸತ್ಯ ಅವರನ್ನು ಊರಿನವರು ಗೌರವಿಸಿದರು. ಇದೇ ಕಾರ್ಯಕ್ರಮದಲ್ಲಿ ಮುತ್ತುವೆಲ್ ಪಿಳ್ಳೆ ಹಾಗೂ ವಿನಾಯಕ್ ಗೊಸವಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಕ್ಕಳ ಬಿಸಿಯೂಟಕ್ಕಾಗಿ ಶಿಕ್ಷಕ ಆರ್ ಇ ನಾಯ್ಕ ಅವರು 55 ಬಟ್ಟಲುಗಳನ್ನು ಕಾಣಿಕೆಯಾಗಿ ನೀಡಿದರು.
ಈ ವೇಳೆ ನೂತನ ಸಿಸಿ ಕ್ಯಾಮರಾಗಳ ಉದ್ಘಾಟನೆ ನಡೆಯಿತು. ಅದಾದ ನಂತರ ಮರದ ನೆರಳಿನ ಅಡಿ ವನಭೋಜನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅನೇಕ ಗಣ್ಯರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂತಸ ಹಂಚಿಕೊoಡರು.