ಭತ್ತ ಹಾಗೂ ಜೋಳದ ಬೆಳೆಗೆ ನೀರುಣಿಸಲು ಕಲಿಕ್ ಕಲೆಗಾರ ಅವರು ಬಳಸುತ್ತಿದ್ದ ಬೋರ್ ವೆಲ್ ಪಂಪು ಕಳ್ಳತನವಾಗಿದೆ.
ಶಿರಸಿ ಬನವಾಸಿಯ ಮೀನುಮಾರುಕಟ್ಟೆ ಬಳಿ ವಾಸವಾಗಿರುವ ಕಲಿಕ್ ಕಲೆಗಾರ ಅವರು ಕಡಗೋಡದಲ್ಲಿ ಕೃಷಿ ಮಾಡುತ್ತಿದ್ದರು. ಅವರು ತಮ್ಮ ಚಿಕ್ಕಪ್ಪನ ಹೆಸರಿನಲ್ಲಿರುವ ಭೂಮಿಯಲ್ಲಿ ಭತ್ತ ಹಾಗೂ ಜೋಳ ಬೆಳೆದಿದ್ದರು. ಅವುಗಳಿಗೆ ನೀರುಣಿಸುವುದಕ್ಕಾಗಿ ಬೋರ್‌ವೆಲ್’ಗೆ ಸೂರಜ್ ಕಂಪನಿಯ ಪಂಪು ಅಳವಡಿಸಿದ್ದರು.
ಜನವರಿ 25ರ ಸಂಜೆ ಗದ್ದೆಗೆ ನೀರುಣಿಸಿದ ಅವರು ಮನೆಗೆ ಮರಳಿದ್ದರು. ಮರುದಿನ ಬೆಳಗ್ಗೆ ಅಲ್ಲಿ ಹೋದಾಗ ಪಂಪ್ ಕಾಣೆಯಾಗಿತ್ತು. ಸುತ್ತಲು ಹುಡುಕಿದರೂ ಪಂಪ್ ಸಿಗಲಿಲ್ಲ. 10 ಸಾವಿರ ರೂ ಬೆಲೆಯ ಪಂಪನ್ನು ಕಳ್ಳರು ಅಪಹರಿಸಿದ್ದರು. ಇದರಿಂದ ಬೇಸರಗೊಂಡ ಕಿರಣ ಕಲೆಗಾರ ಅವರು `ಕಳ್ಳರ ವಿರುದ್ಧ ಕಠಿಣ ಕ್ರಮ ಜರುಗಿಸಿ’ ಎಂದು ಬನವಾಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.