ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಈ ಬಾರಿಯೂ ಕೊನೆ ಗೌಡರಿಗೆ ಉಚಿತ ವಿಮೆ ಮಾಡಿಸುವುದಾಗಿ ಘೋಷಿಸಿದ್ದಾರೆ. ಅಡಿಕೆ ಮರ ಏರುವವರ ಜೊತೆ ದೋಟಿ ಬಳಕೆ ಕೊನೆ ಕೊಯ್ಲು ನಡೆಸುವವರಿಗೆ ಸಹ ಅವರು ವಿಮೆ ಮಾಡಿಸುವುದಾಗಿ ಘೋಷಿಸಿದ್ದಾರೆ.
ಕಳೆದ ವರ್ಷ ಅನಂತಮೂರ್ತಿ ಚ್ಯಾರಿಟೇಬಲ್ ಟ್ರಸ್ಟಿನಿಂದ 3 ಸಾವಿರ ಕೊನೆ ಗೌಡರಿಗೆ ಅವರು ಅಂಚೆ ಇಲಾಖೆ ಮೂಲಕ ವಿಮೆ ಮಾಡಿಸಿದ್ದರು. ಈ ವರ್ಷ ಶಿರಸಿ ವ್ಯಾಪ್ತಿಯ ಕೊನೆ ಗೌಡರಿಗೆ ವಿಮೆ ಮಾಡಿಸುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ವಿಮೆಯ ವ್ಯಾಪ್ತಿಗೆ ಒಳಪಟ್ಟ ಕೊನೆ ಗೌಡರಿಗೆ ಅಡಿಕೆ ಕೆಲಸದ ಜೊತೆ ವಿದ್ಯುತ್ ಅವಘಡ, ಬೈಕ್ ಅಪಘಾತ, ಹಾವು ಕಚ್ಚಿ ಸಾವನಪ್ಪಿದರೆ ಸಹ ವಿಮಾ ಗ್ರಾಹಕರಿಗೆ 10 ಲಕ್ಷ ರೂ ಪರಿಹಾರ ಸಿಗಲಿದೆ.
ವಿಮಾ ಅವಧಿಗೆ ಒಳಪಟ್ಟಿರುವ ದಿನಗಳಲ್ಲಿ ಯಾವುದೇ ಬಗೆಯ ಅವಘಡದಿಂದ ಸಾವನಪ್ಪಿದರೂ ಸಂತ್ರಸ್ತರ ಕುಟುಂಬಕ್ಕೆ 10 ಲಕ್ಷ ರೂ ಆರ್ಥಿಕ ನೆರವು ದೊರೆಯಲಿದೆ. ಇದಲ್ಲದೇ ಶಸ್ತ ಚಿಕಿತ್ಸೆಗೆ ಸಹ 60 ಸಾವಿರ ರೂಪಾಯಿವರೆಗೆ ನೆರವು ಸಿಗಲಿದೆ. ಈಚೆಗೆ ಕೊನೆ ಗೌಡರು ಅಪಾಯದಲ್ಲಿರುವುದನ್ನು ಅರಿತು ಅವರು ಕಳೆದ ವರ್ಷ ಘೋಷಿಸಿದ್ದ ಯೋಜನೆಯನ್ನು ಈ ವರ್ಷವೂ ಮುಂದುವರೆಸಿದ್ದಾರೆ. ಜನ ಜಾಗೃತಿಯ ಉದ್ದೇಶಕ್ಕಾಗಿ ಕೊನೆ ಗೌಡರ ಮೊದಲ ವಿಮಾ ಕಂತು ಪಾವತಿಸುವುದಾಗಿ ಅವರು ಹೇಳಿಕೊಂಡಿದ್ದು, ಮುಂದಿನ ಕಂತುಗಳನ್ನು ಗ್ರಾಹಕರೇ ಪಾವತಿಸಿಕೊಳ್ಳಬೇಕಿದೆ.
ಜನವರಿ 29ರ ಬುಧವಾರ ಬೆಳಗ್ಗೆ ಶಿರಸಿಯ ಎಪಿಎಂಸಿಯಲ್ಲಿರುವ ಟಿಆರ್‌ಸಿ ಸಭಾ ಭವನದಲ್ಲಿ ವಿಮಾ ಯೋಜನೆ ಜಾಗೃತಿ ಕಾರ್ಯಾಗಾರ ನಡೆಯಲಿದೆ. ಆಧಾರ್ ಕಾರ್ಡ ಹಾಗೂ ಮೊಬೈಲ್ ಜೊತೆ ಕೊನೆ ಗೌಡರು ಅಲ್ಲಿ ಹಾಜರಾಗಬಹುದಾಗಿದ್ದು, ಗೊಂದಲಗಳಿದ್ದರೆ ಇಲ್ಲಿ ಫೋನ್ ಮಾಡಿ: 9740673262