ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ಮಾದಕ ವಸ್ತು ಸಾಗಿಸುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಆ ಮಾದಕ ವಸ್ತುವನ್ನು ಖರೀದಿಸಲು ಬಂದಿದ್ದ ಇನ್ನೊಬ್ಬ ಮಹಿಳೆ ಸಹ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ಹುಬ್ಬಳ್ಳಿಯ ಅಯೋಧ್ಯನಗರದ ನಾಸಿಮಾಬಾನು (45) ಎಂಬಾತರು 1.84 ಕೆಜಿ ಗಾಂಜಾವನ್ನು ಯಲ್ಲಾಪುರಕ್ಕೆ ತಂದಿದ್ದರು. ಯಲ್ಲಾಪುರ ಅಂಬೇಡ್ಕರ ನಗರದ ಆಯಿಷಾ ಅಬ್ದುಲ್ ಮನಾಫ್ ಗಾಜನೂರು (36) ಇದನ್ನು ಖರೀದಿಸಿದ್ದರು. ಆ ಗಾಂಜಾವನ್ನು ಬೇರೆಯವರಿಗೆ ಮಾರಾಟ ಮಾಡಿ, ಹೆಚ್ಚಿನ ಹಣಗಳಿಸಲು ಆಯಿಷಾ ನಿರ್ಧರಿಸಿದ್ದರು.
ಈ ವಿಷಯ ಅರಿತ ಪೊಲೀಸರು ತಳ್ಳಿಗೇರಿ ಕ್ರಾಸಿನ ಬಳಿ ಅವರಿಬ್ಬರನ್ನು ವಿಚಾರಣೆಗೆ ಒಳಪಡಿಸಿದರು. ಗಾಂಜಾ ಮಾರಾಟದಿಂದ ಸಂಗ್ರಹಿಸಿದ 2500ರೂ ಹಣ ಹಾಗೂ ಸ್ಕೂಟಿಯೊಂದನ್ನು ಪೊಲೀಸರು ವಶಕ್ಕೆ ಪಡೆದರು.
ಪಿಎಸ್‌ಐ ಸಿದ್ದಪ್ಪ ಗುಡಿ ನೇತ್ರತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಪಿಎಸ್‌ಐ ಮಾಹಾವೀರ ಕಾಂಬಳೆ, ಪೊಲೀಸ್ ಸಿಬ್ಬಂದಿ ಮಹಮದ್ ಶಫಿ, ಉಮೇಶ ತಂಬರಗಿ, ಗಿರೀಶ ಲಮಾಣಿ, ಮುತ್ತಣ್ಣ, ಚನ್ನಕೇಶವ, ಗಂಗಾರಾಮ, ರೇಣುಕಾ ಬೆಳಗಟ್ಟಿ, ದೀಪಾ ಪೈ, ಶೋಭಾ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.